ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಸಿನಿಮಾವನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ಶಾಸಕ ನಿಲೇ ದಾಗ ಅವರ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಹಾಗೂ ಆಯಿಲ್ ಉದ್ಯಮಿಗೆ ಸಂಬಂಧಪಟ್ಟ ಹದಿನೈದು ಕಡೆ ಹಾಗು ಮೂರು ರಾಜ್ಯಗಳಲ್ಲಿ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುಂಬೈ, ಸೋಲಾಪುರ, ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಬೇತಲ್ ಮತ್ತು ಸತ್ನಾದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಶಾಸಕರಿಗೆ ಸೇರಿದ ಕಾರ್ಖಾನೆ, ಶಾಲೆಗಳ ಸಂಬಂಧ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ದಾಗಾ ಅವರ ವ್ಯಾಪಾರಕ್ಕೆ ಸಂಬಂಧಿಸಿದ ಸಂಸ್ಥೆಗಳ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತಿದೆ ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ. ನಿಲೇ ದಾಗ ಅವರ ತಂದೆ ವಿನೋದ ದಾಗ ಕೂಡ ಮಾಜಿ ಕಾಂಗ್ರೆಸ್ ಶಾಸಕರು.
ಅಂದ್ಹಾಗೆ, ರೈತರ ಹೋರಾಟದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕೆ ನಟಿ ಕಂಗನಾ ರಣಾವತ್ ವಿರುದ್ಧ ಶಾಸಕ ನಿಲೇ ದಾಗ ಪ್ರತಿಭಟಿಸಿದ್ದರು. ಸತ್ನಾದಲ್ಲಿ ಕಂಗನಾ ನಟಿಸುತ್ತಿದ್ದ ಧಾಕಡ್ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ವಿರೋಧಿಸಿದ್ದರು.
Laxmi News 24×7