Breaking News

ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ

Spread the love

ಡಾ ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ‘ಅದೊಂದಿತ್ತು ಕಾಲ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಈ ಚಿತ್ರಕ್ಕೆ ಕೀರ್ತಿ ನಿರ್ದೇಶನ ಮಾಡುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾ ಆಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ.

ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಪೋಸ್ಟರ್‌ನಲ್ಲಿ ಪುಟ್ಟ ಹುಡುಗನೊಬ್ಬ ಗಾಳಿಪಟ ಹಾರಿಸುವಂತೆ ಕಾಣಿಸಿಕೊಂಡಿದ್ದಾರೆ. ”ಹೃದಯ ತುಂಬಾ ಅಳುವಿದೆ. ನಗುವಷ್ಟು ಅದೃಷ್ಟವಂತನಲ್ಲ. ಮರೆಯಾದ ನಗುವಿನಲ್ಲಿ ನಗುವಿಲ್ಲದ ನೋವಿನಲ್ಲಿ ನಾ ನಿನ್ನ ಸೆರೆಯಾಗುವೆ….ಓ ಬಾಲ್ಯವೇ ನೀ ಮತ್ತೆ ಬಂದು ಬಿಡು, ನನ್ನ ಮತ್ತೆ ಮಗುವಾಗಿಸು-ಕುಮಾರ” ಎಂದು ಕವನ ಪೋಸ್ಟರ್‌ನಲ್ಲಿ ಗಮನ ಸೆಳೆಯುತ್ತಿದ್ದು, ಚಿತ್ರ ಕಥೆಯ ಬಗ್ಗೆ ಸುಳಿವು ನೀಡುವಂತಿದೆ.

ಭುವನ್, ಲೋಕೇಶ್, ಶಿವಣ್ಣ ಎಸ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಅಭಿಷೇಖ್ ಜಿ ಕಾಸರಗೋಡು, ಅವರ ಛಾಯಾಗ್ರಹಣ ಹಾಗೂ ರಾಘವೇಂದ್ರ ವಿ ಸಂಗೀತ ಒದಗಿಸಿದ್ದಾರೆ.

ಅಂದ್ಹಾಗೆ, ಈ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ, ಸದ್ಯಕ್ಕೆ ಆ ನಟ ಯಾರು ಎನ್ನುವುದು ಗೌಪ್ಯವಾಗಿದೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ