Breaking News

₹29 ಲಕ್ಷ ಪಡೆದು, ಬಳಿಕ ಕಾರ್ಯಕ್ರಮಗಳಿಗೆ ಹಾಜರಾಗದೇ ವಂಚಿಸಿದ್ದಾರೆ ಸನ್ನಿ ಲಿಯೋನ್​

Spread the love

ತಿರುವನಂತಪುರಂ: ಕಾರ್ಯಕ್ರಮಗಳಿಗೆ ಭಾಗವಹಿಸುದಾಗಿ ಬರೋಬ್ಬರಿ ₹29 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಬಾಲಿವುಡ್​ ನಟಿ ಸನ್ನಿ ಲಿಯೋನ್​ನ್ನ ಕೇರಳ ಪೊಲೀಸರು ಇಂದು ವಿಚಾರಣೆ ನಡೆಸಿದ್ದಾರೆ.

ಕೊಚ್ಚಿಯಲ್ಲಿ ಏರ್ಪಡಿಸಲಾದ ಎರಡು ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ ಹೇಳಿ ಸನ್ನಿ ಲಿಯೋನ್​ ₹29 ಲಕ್ಷ ಪಡೆದು, ಬಳಿಕ ಕಾರ್ಯಕ್ರಮಗಳಿಗೆ ಹಾಜರಾಗದೇ ವಂಚಿಸಿದ್ದಾರೆ ಎಂದು ಆಯೋಜಕರು ದೂರು ನೀಡಿದ್ದಾರೆ ಅಂತಾ ವರದಿಯಾಗಿದೆ.

ದೂರಿನ ಅನ್ವಯ ಕೇರಳ ಪೊಲೀಸರು ಸನ್ನಿ ಲಿಯೋನ್ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸನ್ನಿ ಲಿಯೋನ್​ ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದು, ಕೊರೊನಾ ಕಾರಣದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ.

ಸನ್ನಿ ಲಿಯೋನ್​ ವಿರುದ್ಧ ದೂರು ನೀಡಿರುವಾತ ಹೇಳಿರುವ ಪ್ರಕಾರ ಆಕೆ ₹2 ಲಕ್ಷ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಸನ್ನಿ ಲಿಯೋನ್ ಕಡೆಯವರು ₹12 ಲಕ್ಷ ಮಾತ್ರ ಪಡೆದಿರುವುದಾಗಿ ಅದನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಐದು ಬಾರಿ ಕಾರ್ಯಕ್ರಮ ಮುಂದೂಡಲಾಗಿತ್ತು. ಹೀಗಾಗಿ ಎಲ್ಲದಕ್ಕೂ ಸಂಘಟಕರು ಕಾರಣ ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ