Breaking News

ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ ಆಗುತ್ತೇನೆ: ಬಸವರಾಜ ಹೊರಟ್ಟಿ

Spread the love

ಬೆಂಗಳೂರು: ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ ಆಗುತ್ತೇನೆ. ನಮ್ಮ ಪಕ್ಷ ತೀರ್ಮಾನ ಮಾಡಿದೆ ಎಂದು
ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ವಿಧಾನಪರಿಷತ್ ಕಲಾಪ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಫೆ. 8ರಿಂದ 19ರವರೆಗೆ ಮೂರು ದಿನಗಳ ಕಾಲ ವಿಧಾನಪರಿಷತ್ ಕಲಾಪ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕಲಾಪ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿದೆ. ಜೊತೆಗೆ ಸಭಾಪತಿ ಚುನಾವಣೆ ಪ್ರಕ್ರಿಯೆ ಕೂಡ ನಡೆಯಬೇಕಿದೆ. ಹೀಗಾಗಿ ಮೂರು ದಿನ‌ ಕಲಾಪ ವಿಸ್ತರಣೆಗೆ ತೀರ್ಮಾನಿಸಲಾಗಿದೆ. ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ ಆಗುತ್ತೇನೆ. ನಮ್ಮ ಪಕ್ಷ ತೀರ್ಮಾನ ಮಾಡಿದೆ ಎಂದು ಹೊರಟ್ಟಿ ತಿಳಿಸಿದ್ದಾರೆ.

ಈ ಮಧ್ಯೆ, ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಪಕ್ಷದ ತೀರ್ಮಾನದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ನಾಯಕರನ್ನು ಕೇಳಿ ಹೇಳುತ್ತೇನೆ ಎಂದಿದ್ದಾರೆ. ಎಂದಿದ್ದಾರೆ.

ಸಭಾಪತಿ ರಾಜೀನಾಮೆ ಕಾರಣ ಉಪಸಭಾಪತಿ ಎಂ.ಕೆ ಪ್ರಾಣೇಶ್ ನೇತೃತ್ವದಲ್ಲಿ ವಿಧಾನಪರಿಷತ್ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. .

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಮಹಾಂತೇಶ್ ಕವಟಗಿಮಠ್, ಬಿ.ಕೆ ಹರಿಪ್ರಸಾದ್, ಎಂ. ನಾರಾಯಣಸ್ವಾಮಿ ಭಾಗಿ


Spread the love

About Laxminews 24x7

Check Also

ಮೆಟ್ರೋ ದರ ನಿಗದಿ ಸಮಿತಿ ಸಲ್ಲಿಸಿದ ವರದಿ ಬಹಿರಂಗಪಡಿಸಲು ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Spread the loveಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನ ಟಿಕೆಟ್ ದರ ಹೆಚ್ಚಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ತರಿಣಿ ನೇತೃತ್ವದ ದರ ನಿಗದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ