Breaking News

ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಹಾಲಿವುಡ್ ತಾರೆ

Spread the love

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆಗೆ ಕೆಲವು ಬಾಲಿವುಡ್ ತಾರೆಗಳು ಬೆಂಬಲ ಸೂಚಿಸಿದ್ದಾರೆ. ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.

ಇದೀಗ ಖ್ಯಾತ ಪಾಪ್ ಗಾಯಕಿ, ಹಾಲಿವುಡ್ ಸಿನಿಮಾ ನಟಿ ರಿಹಾನಾ ದೆಹಲಿ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ದೆಹಲಿ ರೈತ ಪ್ರತಿಭಟನೆ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ರಿಹಾನಾ, ‘ಇದರ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಪ್ರತಿಭನಾಕಾರ ರೈತರು ಪೊಲೀಸರ ನಡುವೆ ತಿಕ್ಕಾಟದ ನಂತರ ಸರ್ಕಾರವು ದೆಹಲಿ ಸುತ್ತ-ಮುತ್ತ ಇಂಟರ್ನೆಟ್ ಸ್ಥಗಿತಗೊಳಿಸಿದೆ’ ಎಂಬರ್ಥದ ಹೆಡ್‌ಲೈನ್ ಉಳ್ಳ ವಿದೇಶಿ ಆನ್‌ಲೈನ್ ಪತ್ರಿಕೆಯ ವರದಿಯ ಲಿಂಕ್ ಅನ್ನು ರಿಹಾನಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಫಾರ್ಮರ್ ಫ್ರೊಟೆಸ್ಟ್’ ಹ್ಯಾಷ್‌ ಟ್ಯಾಗ್ ಅನ್ನು ಸಹ ಬಳಸಿದ್ದಾರೆ ರಿಹಾನಾ.

ಖ್ಯಾತ ಪಾಪ್ ಗಾಯಕಿ ಆಗಿರುವ ರಿಹಾನಾ ರ ಹಲವಾರು ಆಲ್ಬಂಗಳು ಸೂಪರ್ ಹಿಟ್ ಆಗಿವೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ರಿಹಾನಾ ಹೊಂದಿದ್ದಾರೆ. ಕೆಲವು ಹಾಲಿವುಡ್ ಸಿನಿಮಾಗಳಲ್ಲಿಯೂ ರಿಹಾನಾ ನಟಿಸಿದ್ದಾರೆ. ‘ಬ್ಯಾಟಲ್‌ಶಿಪ್’, ‘ಓಶನ್ಸ್ 8’ , ‘ಹೋಮ್’ ಇನ್ನೂ ಕೆಲವು ಸಿನಿಮಾಗಳಲ್ಲಿ ರಿಹಾನಾ ನಟಿಸಿದ್ದಾರೆ.

ನಟ ದಿಲ್ಜೀತ್ ದುಸ್ಸಾಂಜ್ ಪ್ರಿಯಾಂಕಾ ಚೋಪ್ರಾ, ನಟಿ ಸ್ವರಾ ಭಾಸ್ಕರ್ ಸೇರಿ ಇನ್ನೂ ಹಲವಾರು ಪಂಜಾಬಿ ನಟ-ನಟಿಯರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಟಿ ಕಂಗನಾ ರಣೌತ್ ಹಾಗೂ ಕೆಲವರು ರೈತರ ಪ್ರತಿಭಟನೆಯನ್ನು ವಿರೋಧಿಸಿದ್ದಾರೆ.


Spread the love

About Laxminews 24x7

Check Also

ದೇವಾಲಯದ ಸುತ್ತ ಮಾಂಸಾಹಾರ ನಿಷೇಧ ನೋಟಿಸ್‌ ವಾಪಸ್​: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿನ ಹೊನ್ನೇಶ್ವರ ದೇವಾಲಯದ ಸುತ್ತಲು ಪ್ರಾಣಿಗಳ ವಧೆ ಮತ್ತು ಮಾಂಸಾಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ