Breaking News

ಇಂಜಿನಿಯರ್ ಖಜಾನೆ‌ ಬಗೆದಷ್ಟು ಬಯಲು: ಕಂತೆ ಕಂತೆ ಹಣ ಕಂದು ದಂಗಾದ ಅಧಿಕಾರಿಗಳು!

Spread the love

ಹುಬ್ಬಳ್ಳಿ: ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಕೆ. ಶಿಗ್ಗಾಂವಿ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳೇ ಒಂದು ದಂಗಾಗಿದ್ದಾರೆ. ಅಧಿಕಾರಿಯ ಖಜಾನೆ‌ ಬಗೆದಷ್ಟು ಬಯಲಾಗಯತ್ತಿದ್ದು, ಬ್ಯಾಂಕ್ ಲಾಕರ್​ನಲ್ಲಿ ಲಕ್ಷಾಂತರ ಮೌಲ್ಯದ ಗರಿ ಗರಿ ನೋಟುಗಳು ಪತ್ತೆ‌ಯಾಗಿವೆ.

ಎಇಇ ದೇವರಾಜ ಕೆ. ಶಿಗ್ಗಾಂವಿ ಮನೆ ಮತ್ತು ತಾಯಿ ಹಾಗೂ ಮಾವನ ಮನೆಗಳ ಮೇಲೂ ಎಸಿಬಿ ದಾಳಿ ಮಾಡಿದೆ. ಈ ವೇಳೆ 27 ಎಕರೆ ಆಸ್ತಿ ಖರೀದಿ ಮಾಡಿದ ದಾಖಲೆ ಪತ್ತೆ‌ಯಾಗಿದೆ. ಜತೆಗೆ ಅಪಾರ ಪ್ರಮಾಣದ ಚೆಕ್​ಬುಕ್​ಗಳು ಪತ್ತೆ‌ಯಾಗಿವೆ.

ಇಂಡಿಯನ್ ಓವರ್​ಸಿಸ್ ಬ್ಯಾಂಕ್ ಲಾಕರ್ ಪತ್ತೆಯಾಗಿದ್ದು, ದೇವರಾಜ್​ರನ್ನು ಬ್ಯಾಂಕ್ ಕರೆದೊಯ್ದು ಲಾಕರ್ ಓಪನ್​ ಮಾಡಿದ ಎಸಿಬಿ ಅಧಿಕಾರಿಗಳು ಒಂದು ಕ್ಷಣ ಶಾಕ್‌ ಆದರು. ಬ್ಯಾಂಕ್ ಲಾಕರ್ ನಲ್ಲಿ ಸುಮಾರು 56.50 ಲಕ್ಷ ರೂ. ನಗದು ಪತ್ತೆಯಾಗಿದೆ. ಬರೋಬ್ಬರಿ ಅರ್ಧ ಕೆಜಿ ಚಿನ್ನಾಭರಣ ಸಿಕ್ಕಿದೆ. ಪತ್ನಿ ಮತ್ತು ಅಳಿಯನ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ ಇದೆ.

ಶಿಗ್ಗಾಂವಿಗೆ ಸಂಬಂಧಿಸಿದ ಆಸ್ತಿ ದಾಖಲೆ, ಹಣಕಾಸು ವ್ಯವಹಾರದ ಬಗ್ಗೆ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದ ತಂಡ ಪರಿಶೀಲನೆ ಮಾಡುತ್ತಿದೆ.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ