ಬೆಂಗಳೂರು: ಸಿಸಿಬಿಗೆ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಜೊತೆಗೆ, ಸಿಸಿಬಿಗ ಚಾರ್ಜ್‌ಶೀಟ್ ಆಧರಿಸಿದ್ದ ವಿಚಾರಣೆಯನ್ನು ಸಹ ಕೋರ್ಟ್ ರದ್ದುಪಡಿಸಿದೆ.
ಎಂಬಿಬಿಎಸ್ ಪ್ರವೇಶಕ್ಕೆ ಡೊನೇಷನ್ ಸಂಗ್ರಹ ಆರೋಪದಡಿ ಕೆ. ಆರ್. ಚೌಧರಿ ಎಂಬುವವರ ದೂರು ಆಧರಿಸಿ ಚಾರ್ಜ್‌ಶೀಟ್ ದಾಖಲಾಗಿತ್ತು. ಸಿಸಿಬಿ ಪೊಲೀಸರು ಒಕ್ಕಲಿಗರ ಸಂಘದ ಡಾ.ಎಂ.ಜಿ.ಗೋಪಾಲ್, ಡಾ.ಅಪ್ಪಾಜಿ ಗೌಡ ಮತ್ತು ಡಾ.ನಿಸರ್ಗ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.ಇದೀಗ, ನ್ಯಾ.ಬಿ.ಎ.ಪಾಟೀಲ್‌ರವರಿದ್ದ ಏಕಸದಸ್ಯ ಪೀಠ ಆದೇಶ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರ ಪ್ರಕರಣ ರದ್ದುಪಡಿಸಿದೆ. ಜೊತೆಗೆ ಡಾ.ಎಂ.ಜಿ.ಗೋಪಾಲ್, ಡಾ.ಅಪ್ಪಾಜಿ ಗೌಡ ಮತ್ತು ಡಾ.ನಿಸರ್ಗ ವಿರುದ್ಧದ ಕೇಸ್ ಗಳನ್ನೂ ಸಹ ಹೈಕೋರ್ಟ್ ರದ್ದುಗೊಳಿಸಿದೆ.