Breaking News

ಮೃತ ಕುಟುಂಬಸ್ಥರಿಗೆ ಧನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೊಳಿ

Spread the love

 

 

ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಹೊಲದಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಶಿನಿನಲ್ಲಿ ಸೀರೆ ಸಿಲುಕಿ ಮರಣ ಹೊಂದಿದ್ದ ಪಾಶ್ಚಾಪುರದಲ್ಲಿರುವ ಮೃತ ಯಮನವ್ವ ದುಂಡಪ್ಪ ಉಪ್ಪಾರ ಇವರ ಮನೆಗೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೊಳಿಯವರ ಪುತ್ರ ರಾಹುಲ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರು
ಮೃತ ಕುಟುಂಬದ ಸದಸ್ಯರಿಗೆ ಧನ ಸಹಾಯ ಮಾಡಿದರು.

ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಗಣಿ ದರ್ಗಾ ಮಾತನಾಡಿ ಇವತ್ತಿನ ದಿನ ಸತೀಶ ಜಾರಕಿಹೋಳಿಯವರು ಮೃತ ಕುಟುಂಬದವರ ಬಡತನ ನೋಡಿ ಅವರ ಬವಿಷ್ಯದಲ್ಲಿ ಸಹಾಯವಾಗಲೆಂದು ಧನ ಸಹಾಯ ಮಾಡಿದ್ದಕ್ಕೆ ಪಾಶ್ಚಾಪುರ ಗ್ರಾಮ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು,ಈಗಾಗಲೇ ಹಲವಾರು ಬಡಕುಟುಂಬಗಳಿಗೆ ಸಹಾಯಹಸ್ತ ಚಾಚುತ್ತಾ ಬಂದಿರುತ್ತಾರೆ ಅಂತವರನ್ನು ಶಾಸಕಾರಾಗಿ ಪಡೆದವರು ನಾವು ಧನ್ಯರೆಂದರು. ಈ ಸಂದರ್ಭದಲ್ಲಿ ಮೃತ ಕುಟುಂಬದವರಾದ ಪರಶುರಾಮ ಉಪ್ಪಾರ, ನಾಗಪ್ಪ ಉಪ್ಪಾರ,ಕುಮಾರ ಗುಡಗನಟ್ಟಿ .ರಾಮಚಂದ್ರ ಆವೋಜಿ,ಬಾಬು ಹೀರೆಕೋಡಿ,ಕೆಂಪಣ್ಣಾ ಮುಗಳಿ ಇನ್ನುಳಿದ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೈಕ್​ ಡಿಕ್ಕಿ ಹೊಡೆದ ಪರಿಣಾಮ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಗಾಯಗೊಂಡಿದ್ದಾರೆ.

Spread the loveಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ