Breaking News

ಬ್ರಿಟನ್ ದೇಶದಿಂದ ಭಾರತಕ್ಕೆ ಮರಳಿರುವ ಜನರ ಪೈಕಿ ಆರು ಮಂದಿಯಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್

Spread the love

ಬೆಂಗಳೂರು(ಡಿ. 29): ಬ್ರಿಟನ್ ದೇಶದಿಂದ ಭಾರತಕ್ಕೆ ಮರಳಿರುವ ಜನರ ಪೈಕಿ ಆರು ಮಂದಿಯಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಮಂದಿ ಇದ್ದಾರೆ. ಹೈದರಾಬಾದ್​ನ ಇಬ್ಬರು ಹಾಗೂ ಪುಣೆಯ ಒಬ್ಬರೂ ಇದರಲ್ಲಿ ಸೇರಿದ್ದಾರೆ. ಬೆಂಗಳೂರಿನ ಮೂವರಲ್ಲಿ ನೂತನ ವೈರಸ್ ಮ್ಯೂಟೆಂಟ್ ಪತ್ತೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಬ್ರಿಟನ್ ದೇಶದಿಂದ ಡಿಸೆಂಬರ್ 1ರಿಂದ 21ರವರೆಗೆ ಬೆಂಗಳೂರಿಗೆ ಬಂದವರ ಸಂಖ್ಯೆ 1,594 ಇದೆ. ಇವರ ಪೈಕಿ 1,380 ಮಂದಿಯನ್ನ ಬಿಬಿಎಂಪಿ ಟ್ರ್ಯಾಕ್ ಮಾಡಿ 1,234 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. 931 ಮಂದಿಯ ವರದಿ ಬಂದಿದೆ. ಇವರ ಪೈಕಿ 16 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಮೂವರಲ್ಲಿ ಮ್ಯೂಟೆಂಟ್ ವೈರಸ್ ಇರುವುದು ಇಂದು ಬಂದ ವರದಿಯಲ್ಲಿ ಬೆಳಕಿಗೆ ಬಂದಿದೆ. ಇನ್ನೂ 303 ಜನರ ವರದಿ ಬರಬೇಕಿದೆ. ಆತಂಕದ ವಿಷಯವೆಂದರೆ ಬ್ರಿಟನ್​ನಿಂದ ಬೆಂಗಳೂರಿಗೆ ಬಂದ 1,595 ಮಂದಿ ಪೈಕಿ 212 ಜನರ ಸುಳಿವು ಸಿಕ್ಕಿಲ್ಲ. ಅಧಿಕಾರಿಗಳು ವಿವಿಧ ರೀತಿಯಲ್ಲಿ ಪ್ರಯತ್ನ ಪಟ್ಟರೂ ಇವರ ಜಾಡು ಹಿಡಿಯಲು ಸಾಧ್ಯವಾಗಿಲ್ಲ. ಇವರಲ್ಲಿ ಹೊಸ ಸ್ವರೂಪದ ವೈರಸ್ ಇದ್ದರೆ ಏನು ಗತಿ ಎಂಬ ಆತಂಕ ಎದುರಾಗಿದೆ.

ಕೊರೋನಾ ಸೋಂಕು ಪತ್ತೆಯಾಗಿರುವ 26 ಮಂದಿಯನ್ನು ಐಸೋಲೇಶನ್​ನಲ್ಲಿಡಲಾಗಿದೆ.  ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಗುರುತಿಸಿ ಕ್ವಾರಂಟೈನ್​ನಲ್ಲಿಡುವ ಪ್ರಕ್ರಿಯೆ ನಡೆಯುತ್ತಿದೆ. ಮಾಮೂಲಿಯ 14 ದಿನಗಳ ಕ್ವಾರಂಟೈನ್ ಬದಲು 24 ದಿನಗಳ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಮ್ಯುಟೇಟ್ ಆದ ವೈರಸ್ ಪತ್ತೆಯಾಗಿರುವ ಮೂವರಲ್ಲಿ ಬೊಮ್ಮನಹಳ್ಳಿಯ ತಾಯಿ ಮತ್ತು ಮಗಳು ಇದ್ದಾರೆ. ಇವರ ಸಂಪರ್ಕಕ್ಕೆ ಬಂಬ 39 ಮಂದಿಯನ್ನು ಗುರುತಿಸಿ ಕ್ವಾರಂಟೈನ್​ನಲ್ಲಿಡಲಾಗಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ