ಚಿಕ್ಕಮಗಳೂರು: ಮಾಸ್ಕ್ ಹಾಕದ್ದಕ್ಕೆ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದು, ಈ ಮೂಲಕ ಮಾಸ್ಕ್ ಹಾಕುವಂತೆ ಜಾಗೃತಿ ಮೂಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ಘಟನೆ ನಡೆದಿದ್ದು, ಯುವಕ ಲಕ್ಷ್ಮಣಗೆ ಪಿಎಸ್‍ಐ ಶಂಭುಲಿಂಗಯ್ಯರಿಂದ ಲಾಠಿ ಏಟು ನೀಡಿದ್ದಾರೆ. ಲಾಠಿ ಏಟಿನಿಂದ ಯುವಕನ ಮೂಗು, ಕಣ್ಣಿಗೆ ಗಾಯವಾಗಿದ್ದು, ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಪಿಎಸ್‍ಐ ಶಂಭುಲಿಂಗಯ್ಯ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದು, ಆಲ್ದೂರು ಪೊಲೀಸ್ ಠಾಣೆಗೆ ಸಾರ್ವಜನಿಕರು ಮುತ್ತಿಗೆ ಹಾಕಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಪಿಎಸ್‍ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Laxmi News 24×7