Breaking News

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ; ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು

Spread the love

ಸರ್ಕಾರ ಬಡವರು ತುತ್ತು ಅನ್ನಕ್ಕೂ ಪರದಾಡಬಾರದು ಎಂಬ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಬಡವರ ಹೊಟ್ಟೆ ತುಂಬಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಯೋಜನೆಯಲ್ಲಿ ಬಡವರಿಗೆ ಉಚಿತ ಅಕ್ಕಿ ನೀಡುವ ಮೂಲಕ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಆದರೆ, ಅದೇ ಅಕ್ಕಿ ಇಂದು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ಹಾಡು ಹಗಲೇ ರೇಷನ್ ಅಂಗಡಿಯಿಂದ ಅಕ್ಕಿ ತಂದು ತಮ್ಮದೆ ಒಂದು ಬ್ರಾಂಡ್ ನ ಚಿಲಕ್ಕೆ ಹಾಕಿ ಅಕ್ಕಿ ಮಾರಾಟ ಮಾಡು ಜಾಲ ಕೆಲಸ ಮಾಡುತ್ತಿದೆ. ಇಂತಹದೊಂದು ದೊಡ್ಡ ಮಾಫಿಯಾ ಕೆಲಸ ಮಾಡುತ್ತಿರುವುದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ. ಪಟ್ಟಣದ ಹೊರವಲಯದ ರವಿ ಹೆಬ್ಬಾಳೆ ಎಂಬುವವರ ಗೋದಾಮಿನಲ್ಲಿ ಈ ಒಂದು ಅಕ್ರಮ ಅಕ್ಕಿ ಧಂದೆ ನಡೆಯುತ್ತಿದೆ.

ಸರ್ಕಾರದಿಂದ ಬಡವರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗಬೇಕು ಎನ್ನುವ ಉದ್ದೇಶದಿಂದ ಬಡವರಿಗೆ ಅಕ್ಕಿ ವಿತರಣೆ ಮಾಡಲು ರೇಷನ ಅಂಗಡಿಗಳನ್ನ ಗುರುತು ಮಾಡಿದೆ ಅಲ್ಲದೆ ಬಾಣಂತಿಯರಿಗೆ ಅಂಗನವಾಡಿ ಕೇಂದ್ರದ ಮೂಲಕ ವಿತರಣೆ ಮಾಡುತ್ತದೆ. ಆದರೆ, ಹಣದ ಆಸೆಗೆ ಇಲ್ಲಿಗೆ ಬರುವ ಅಕ್ಕಿಯನ್ನ ಬಡವರಿಗೆ ಸಂಪೂರ್ಣ ಹಂಚದೆ ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡಿ ಉಳಿದ ಅಕ್ಕಿಯನ್ನ ಇಲ್ಲಿನ ಗೋದಾಮಿಗೆ ತರಲಾಗುತ್ತದೆ. ಇಲ್ಲಿಗೆ ಬರುವ ಅಕ್ಕಿಯನ್ನ ಈ ಖದೀಮರು ಕಡಿಮೆ ಬೆಲೆಗೆ ಖರೀದಿ ಮಾಡಿ ಇಲ್ಲಿಗೆ ತಂದು ಬೇರೆಡೆಗೆ ಮಾರಾಟಇನ್ನು ಸಾಮಾನ್ಯವಾಗಿ ಸರ್ಕಾರದಿಂದ ಬರುವ ಅಕ್ಕಿಯ ಚೀಲದ ಮೇಲೆ ಎಲ್ಲಿಂದ ಖರಿದಿ ಮಾಡುತ್ತಾರೋ ಆ ಸರ್ಕಾರದ ಮುದ್ರಾಂಕ ಇರುತ್ತೆ ಹಾಗಾಗಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಆ ಒಂದು ಚೀಲವನ್ನ ಇದೆ ಗೋದಾಮಿನಲ್ಲಿ ತಂದು ಸರ್ಕಾರಿ ಚೀಲದಿಂದ ತಮ್ಮದೆ ಆದ ಬ್ರಾಂಡ್ ಚಿಲಕ್ಕೆ ಅಕ್ಕಿಯನ್ನ ಹಾಕಿ ತಮ್ಮದೇ ಅಕ್ಕಿ ಎಂದು ಪಕ್ಕದ ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಾರೆ ಇಲ್ಲಿನ ಖದಿಮರು.

ಅಕ್ರಮಕ್ಕೆ ಅಧಿಕಾರಿಗಳ ಸಾಥ.?

ಇನ್ನು ಈ ಅಕ್ರಮ ಧಂದೆ ಯಾವುದು ಸಹ ಕದ್ದು ಮುಚ್ಚಿ ನಡೆಯಲ್ಲ. ಇದರಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಅಕ್ರಮ ಧಂದೆಕೋರರ ಬಳಿ ಹಣ ಪಡೆದು ಅಕ್ರಮಕ್ಕೆ ಸಾಥ ನೀಡುತ್ತಾರೆ ಎಂಬ ಆರೋಪ ಇದೆ. ಅಕ್ರಮ ನಡೆಯುವುದು ಗೊತ್ತಿದ್ದರು ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಇಲ್ಲಿನ ಅಧಿಕಾರಿಗಳು ವರ್ತನೆ ಮಾಡುತ್ತಾರೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ