ಬೆಳಗಾವಿ : ವರದಕ್ಷಿಣೆ ಆಸೆಗೆ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನ ಪತಿ ಕೊಲೆ ಮಾಡಿ, ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ರಾಮದುರ್ಗ ತಾಲ್ಲೂಕಿನ ತೋರಣಗಟ್ಟಿ ಗ್ರಾಮದಲ್ಲಿ ನಡೆದಿದೆ.
ರವಿ ಗೂರ್ಲಹೊಸುರು(33) ಕೊಲೆ ಆರೋಪಿ. ಶೈಲಾ ಕೊಲೆಯಾದ ಮಹಿಳೆ.
ಕಳೆದ 6 ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಗ್ರಾಮದ ಶೈಲಾ ಅವರನ್ನು ರವಿ ಮದುವೆಯಾಗಿದ್ದನು. ದಂಪತಿಗೆ ಒಂದು ಗಂಡು , ಒಂದು ಹೆಣ್ಣು ಮಕ್ಕಳು ಇದ್ದಾರೆ. ಇದೀಗ ಶೈಲಾ ಮೂರು ತಿಂಗಳ ಗರ್ಭಿಣಿ ಆಗಿದ್ದಳೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೊದಲು ಹೆಂಡತಿಯನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ ರವಿ . ಇತ್ತೀಚಿಗೆ ಹೆಂಡತಿಗೆ ವರದಕ್ಷಿಣೆ ನೀಡುವಂತೆ ಕುಡಿದು ಬಂದು ಕಿರುಕುಳ ನೀಡುತ್ತಿದ್ದನು. ಈ ವಿಷಯವನ್ನು ಮಗಳು ಪೋಷಕರಿಗೆ ತಿಳಿಸಿದ್ದಳು. ಆಗ ಶೈಲಾ ತಂದೆ-ತಾಯಿ ಮಗಳು ಚನ್ನಾಗಿದ್ದರೆ ಸಾಕೆಂದು, ವರದಕ್ಷಿಣೆ ನೀಡಿದ್ದಾರೆ.
ಈಚೆಗೆ ಶೈಲಾನ ಚಿಕ್ಕ ಸಹೋದರಿಯ ಮದುವೆ ಆಗಿದೆ. ಅವಳಿಗೆ ಹೆಚ್ಚು ಬಂಗಾರ ಹಾಗೂ ಹಣ ಕೊಟ್ಟಿದ್ದೀರಿ. ನನಗೂ ಅವರಿಗೆ ಕೊಟ್ಟಷ್ಟು ವರದಕ್ಷಿಣೆ ಕೊಡಬೇಕೆಂದು ಪೀಡಿಸಿದ್ದಾನೆ. ಸ್ವಲ್ಪ ದಿನ ಕಾಯುವಂತೆ ಮಗಳಿಗೆ ತಂದೆ ಹೇಳಿದ್ದಾನೆ. ಇದಾದ ಬಳಿಕ ಗರ್ಭಿಣಿ ಪತ್ನಿಯನ್ನು ವಾಕಿಂಗ್ ಹೋಗಿ ಬರೋಣ ಬಾ ಅಂತಾ ಹೇಳಿ ಕರೆದುಕೊಂಡು ಹೋಗಿ ನಾಲ್ಕು ಜನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ.
Laxmi News 24×7