Breaking News

ಮುಂಬೈ ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಇದೆ. ಮಹಾರಾಷ್ಟ್ರದ ಸರ್ಕಾರ ಹತ್ತು ಕೋಟಿ ಹಣ ನೀಡುತ್ತಿದೆ:ಮರಾಠಿ ದ್ವೇಷ ಬಿಡಿ – ಯತ್ನಾಳ್‌

Spread the love

ಬೆಂಗಳೂರು: ಮುಂಬೈ ಬೊರಿವಿಲಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ಅದಕ್ಕೆ ಮಹಾರಾಷ್ಟ್ರದ ಸರ್ಕಾರ ಹತ್ತು ಕೋಟಿ ಹಣ ನೀಡುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಿ ಹಾಗೂ ಮರಾಠರ ಮೇಲೆ ಇರುವ ದ್ವೇಷ ಬಿಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.ಈ ಸಂಬಂಧ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್‌ ಪ್ರಕಟಿಸಿ ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನನ್ನ ಬೆಂಬಲ ಇದೆ. ಏಕೆಂದರೆ ಶೃಂಗೇರಿ ಮಠವನ್ನು ಟಿಪ್ಪು ಸುಲ್ತಾನನ ಅತಿಕ್ರಮಣದಿಂದ ಕಾಪಾಡಿದ್ದು ಮರಾಠರು. ಶ್ರೀರಂಗಪಟ್ಟಣಕ್ಕೆ ಟಿಪ್ಪು ಸುಲ್ತಾನ್ ಲೂಟಿ ಮಾಡಿ ಅಲ್ಲಿ ಇದ್ದ ಜನರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದಾಗ ಆಗ ಮರಾಠರು ಬಂದು ಶ್ರೀರಂಗಪಟ್ಟಣವನ್ನು ಕಾಪಾಡಿದರು

ಹೈದರಾಲಿ ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದಾಗ ಆಗ ಮರಾಠರು ಬಂದು ಮದಕರಿ ನಾಯಕನಿಗೆ ಸಹಾಯಕ್ಕೆ ಧಾವಿಸುವಾಗ ಮಾರ್ಗ ಮಧ್ಯದಲ್ಲಿ ಹೈದರಾಲಿ ಸೈನಿಕರು ಮರಾಠ ಸೈನಿಕರನ್ನು ತಡೆದಿದ್ದಾರೆ ಹಾಗೂ ಮದಕರಿ ನಾಯಕನ ಸೇನೆಯಲ್ಲಿ ಇದ್ದ ಮುಸಲ್ಮಾನರು ಹೈದರಾಲಿ ಕಡೆಗೆ ಬಂದಿದ್ದಕ್ಕೆ ಅಲ್ಲಿ ಮೋಸ ಆಯಿತು.

ಹೈದರಾಲಿ ಕುತಂತ್ರದಿಂದ ಜೈಲು ಪಾಲಾದ ರಾಜಮಾತೆಗೆ ಸಹಾಯ ಮಾಡಿದ್ದು ಮರಾಠರು ಹಾಗೂ ಮೈಸೂರು ರಾಜಮನೆತನಕ್ಕೆ ಮತ್ತೆ ಅಧಿಕಾರ ಸಿಗುವಂತೆ ಸಹಾಯ ಮಾಡಿದ್ದು ಮರಾಠರು.

ಟಿಪ್ಪು ಸುಲ್ತಾನ್ ಬೆಂಗಳೂರಿನಲ್ಲಿ ಪಾಳೆಯಗಾರರನ್ನು ಹತ್ಯೆ ಮಾಡುತ್ತಿದ್ದಾಗ ಆಗ ಮರಾಠರು ಬಂದು ಕಾಪಾಡಿದರು. ಧಾರವಾಡಕ್ಕೆ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಅಲ್ಲಿ ಇದ್ದಬದ್ದ ಜನರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದಾಗ ಆಗ ಮರಾಠರು ಬಂದು ಕಾಪಾಡಿದರು.

ಟಿಪ್ಪು ಸುಲ್ತಾನ್ ಮದಕರಿ ನಾಯಕರು ಕಟ್ಟಿಸಿದ ಚಿತ್ರದುರ್ಗದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಠಕ್ಕೆ ಮುತ್ತಿಗೆ ಹಾಕಿ ಆ ದೇವಸ್ಥಾನದ ಆವರಣದಲ್ಲಿ ಇರುವ ಒಂದು ವಿಗ್ರಹವನ್ನು ಧ್ವಂಸ ಮಾಡಿದ್ದಾನೆ ಹಾಗೂ ಮದಕರಿ ನಾಯಕ ನಿರ್ಮಿಸಿದ ನಾಯಕನಹಟ್ಟಿ ಕೆರೆಗೆ ವಿಷ ಹಾಕಿ ಅಲ್ಲಿ ಇದ್ದಬದ್ದ ಜನರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದನು. ಆದರೆ ಈ ಸತ್ಯ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಇತಿಹಾಸವನ್ನು ತಿರುಚಿ ಬರೆದ ಸುಳ್ಳು ಇತಿಹಾಸವನ್ನು ನಮ್ಮ ಜನರು ನಂಬಿದ್ದಾರೆ. ಇದು ನಮ್ಮ ದುರಂತ.

ಮುಂಬೈ ನ ಬೊರಿವಿಲಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ಅದಕ್ಕೆ ಮಹಾರಾಷ್ಟ್ರದ ಸರ್ಕಾರ ಅದಕ್ಕೆ ಹತ್ತು ಕೋಟಿ ಹಣ ನೀಡುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಿ ಹಾಗೂ ಮರಾಠರ ಮೇಲೆ ಇರುವ ದ್ವೇಷ ಬಿಡಿ.

 


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ