Breaking News

ಬಂದ್ ವೇಳೆ ಕುಡುಕನ ರಂಪಾಟಕ್ಕೆ ಪೊಲೀಸರು ಸುಸ್ತು

Spread the love

ಗದಗ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಇಂದು ಬೀದಿಗಿಳಿದಿವೆ. ಈ ಮಧ್ಯೆ ಕುಡುಕನೋರ್ವ ರಂಪಾಟ ಮಾಡಿದ್ದು, ಪೊಲೀಸರೇ ಸುಸ್ತಾದ ಘಟನೆ ಗದಗ್ ನಲ್ಲಿ ನಡೆದಿದೆ.

ಹೌದು. ಸರ್ಕಾರದ ವಿರುದ್ಧ ಗದಗ ನಗರದ ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಕುಡುಕ ರಾದ್ಧಾಂತ ಮಾಡಿದ್ದಾನೆ. ಕುಡುಕನ ರಗಳೆಗೆ ಪೊಲೀಸರು ಹಾಗೂ ಪ್ರತಿಭಟನೆಕಾರರು ಸುಸ್ತಾಗಿದ್ದಾರೆ.

ಪ್ರತಿಭಟನೆಯಲ್ಲಿ ಕುಡುಕನ ರಂಪಾಟ ಪೊಲೀಸರಿಗೆ ಪ್ರಾಣ ಸಂಕಟ ಎಂಬಂತಾಗಿದ್ದು, ಕೊನೆಗೆ ಆತನನ್ನು ಪೊಲೀಸರು ಎಳೆದು ಹಾಕಿದ ಪ್ರಸಂಗ ನಡೆಯಿತು.ಪ್ರತಿಭಟನೆ ವೇಳೆ ಲಾರಿಗಳನ್ನ ಅಡ್ಡಗಟ್ಟಿ ಪೊಲೀಸರ ಜೊತೆ ವಾಗ್ವಾದ ನಡೆಯಿತು. ವಾಹನ ತಡೆಯಲು ಪೊಲೀಸರು ತಾಕೀತು ಮಾಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಕರವೆ ಕಾರ್ಯಕರ್ತರು ವಾಹನ ಏರಿ ರಸ್ತೆ ತಡೆಗೆ ಮುಂದಾದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರ ಹರಸಾಹ ಪಟ್ಟರು.


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ