Breaking News

ಕರವೇಗೆ ‘ಕಳ್ಳರ ರಕ್ಷಣಾ ವೇದಿಕೆ’ ಎಂದ ಶಾಸಕ ಬಸನಗೌಡ ಪಾಟೀಲ್

Spread the love

ವಿಜಯಪುರ: ಕರವೇ ಅಂದರೆ ಕಳ್ಳರ ರಕ್ಷಣಾ ವೇದಿಕೆ. ಯಾರೂ ನಕಲಿ ಕನ್ನಡ ಪರ ಸಂಘಟನೆಗಳಿಗೆ ಹೆದರಬೇಡಿ. ಡಿ. 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿಫಲಗೊಳಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಕರವೇ ವಿರುದ್ಧ ಮತ್ತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿ ಕಾರಿದ್ದಾರೆ.
ಡಿ. 5 ರ ಕರ್ನಾಟಕ ಬಂದ್ ವಿರೋಧಿಸಿ ನಡೆದ ನಾನಾ ಸಂಘಟನೆಗಳು ಮತ್ತು ಸಮಾಜಗಳ ಸಭೆಯಲ್ಲಿ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಬೆಂಬಲವಾಗಿ ಈ ಸಭೆ ನಡೆಸಲಾಗುತ್ತಿದೆ. ಇಂದು ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ನಡೆಯುತ್ತಿದೆ.

ಸವರ್ಣಿಯರು-ದಲಿತರು, ಕನ್ನಡಿಗರು,-ಮರಾಠಿಗರನ್ನು, ಮಂಗಳೂರಿನಲ್ಲಿ ಮಾರವಾಡಿಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಕನ್ನಡ ಪರ ಹೋರಾಟಗಾರರಲ್ಲಿ ಕೆಲವರಿಗೆ ಕನ್ನಡವೇ ಬರಲ್ಲ. ಈಗ ಮೊದಲ ಹಂತದಲ್ಲಿ ನಮ್ಮ ಬೆಂಬಲಿಗರು ಈ ಸಂಘಟನೆಗಳ ವಿರುದ್ಧ ಜನಜಾಗೃತಿ ಮಾಡುತ್ತಿದ್ದಾರೆ. ಎರಡು ಮತ್ತು ಮೂರನೇ ಹಂತ ಮಾಡಿದರೆ ನಕಲಿ ಹೋರಾಟಗಾರರು ನೇಣು ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯ ಮಾಡಿದರು.

ವಿಜಯಪುರ ಅಷ್ಟೇ ಅಲ್ಲ, ಇಡೀ ಕರ್ನಾಟಕದ ಜನತೆ ಈ ಬಂದ್ ವನ್ನು ಸಂಪೂರ್ಣ ವಿಫಲ ಮಾಡಿ ನಮ್ಮ ಶಕ್ತಿ ತೋರಿಸುವ ಮೂಲಕ ನಕಲಿ ಹೋರಾಟಗಾರರಿಗೆ ಬುದ್ದಿ ಕಲಿಸೋಣ ಎಂದು ಸಂದೇಶ ನೀಡುವುದಾಗಿ ತಿಳಿಸಿದರು. ಮರಾಠ ಸಮಾಜವನ್ನು ಮರಾಠಿ ಶಬ್ದದ ಮೂಲಕ ಒಡೆಯುವ ಕುತಂತ್ರ ರಾಜ್ಯದಲ್ಲಿ ನಡೆದಿದೆ ಎಂದು ಹೇಳಿದರು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ