Breaking News

ಕಲಬುರಗಿ ಜಿಲ್ಲೆಯ 19 ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ:ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ

Spread the love

ಕಲಬುರಗಿ : ನ್ಯಾಯಾಲಯದಲ್ಲಿನ ಪ್ರಕರಣ ಬಾಕಿ, ಅವಧಿ ಮುಕ್ತಾಯವಾಗದ ಹಾಗೂ ಮತ್ತಿತರರ ಕಾರಣದಿಂದ ಕಲಬುರಗಿ ಜಿಲ್ಲೆಯ 19 ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

ಯಾವ ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ಇಲ್ಲ ಎಂದು ನೋಡುವುದಾದರೆ.
ಚಿತ್ತಾಪುರ ತಾಲೂಕಿನ 20-ಡೊಣಾಗಾಂವ, 25-ಕೋಲ್ಲೂರ, 27-ರಾಂಪೂರಹಳ್ಳಿ.
ಚಿಂಚೋಳಿ ತಾಲೂಕಿನ 14-ಕರ್ಚಖೇಡ, 15-ಗರಗಪಳ್ಳಿ.
ಕಮಲಾಪುರ ತಾಲೂಕಿನ 03-ಮರಗುತ್ತಿ, 17-ಮುದ್ದಡಗಾ.
ಕಾಳಗಿನ ತಾಲೂಕಿನ 11-ಶೇಳ್ಳಗಿ, 16-ಮೋಘಾ, 17-ರುಮ್ಮನಗೂಡ.
ಯಡ್ರಾಮಿ ತಾಲೂಕಿನ 06-ಕರಕಿಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗುತ್ತಿಲ್ಲ.

ಅದೇ ರೀತಿ ಆಳಂದ ತಾಲೂಕಿನ 16-ಹಾಳತಡಕಲ್, 14-ಢಣ್ಣೂರ
19-ನೀರಗುಡಿ, 34-ಭೂಸನೂರ, 37-ಹಿತ್ತಲಶಿರೂರ.
38-ಧುತ್ತರಗಾಂವ, ಜೇವರ್ಗಿ ತಾಲೂಕಿನ 09-ಮದರಿ ಹಾಗೂ 20-ರಂಜಣಗಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗುತ್ತಿಲ್ಲ.

ಕಲಬುರಗಿ ಜಿಲ್ಲೆಯ 261 ಗ್ರಾಮ ಪಂಚಾಯತಿಗಳ ಪೈಕಿ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸೋಮವಾರ ಘೋಷಿಸಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ