Breaking News

ಕುರ್ಚಿ ಬಿಟ್ಟು ಎದ್ದೇಳಿ, ರೈತರ ಮೇಲೆ ಟಿಯರ್ ಗ್ಯಾಸ್ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಬಿಡಿ: ರಾಹುಲ್ ಗಾಂಧಿ,

Spread the love

ಹೊಸದಿಲ್ಲಿ:   ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅವರ ಹಕ್ಕುಗಳನ್ನು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅನ್ನದಾತರು ರಸ್ತೆಯಲ್ಲಿ ಕುಳಿತಿದ್ದರೇ ಟಿವಿಯಲ್ಲಿ ಭಾಷಣಗಳು ಬರುತ್ತಿವೆ, ಶ್ರಮಜೀವಿಗಳ ಋಣದಲ್ಲಿದ್ದೇವೆ, ಅವರಿಗೆ ನ್ಯಾಯ ಒದಗಿಸುವ ಮೂಲಕ ಅವರ ಋಣ ತೀರಿಸಬೇಕಿದೆ. ರೈತರ ಶ್ರಮಕ್ಕೆ ಎಲ್ಲರೂ ಆಭಾರಿಯಾಗಿದ್ದಾರೆ, ಹೀಗಾಗಿ ಅವರಿಗೆ ನ್ಯಾಯ ಒದಗಿಸುವ ಮೂಲಕ ನಾವು ಅವರು ಋಣವನ್ನು ತೀರಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕುರ್ಚಿ ಬಿಟ್ಟು ಎದ್ದೇಳಿ, ರೈತರ ಮೇಲೆ ಟಿಯರ್ ಗ್ಯಾಸ್ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಬಿಡಿ ಎಂದು ರಾಹುಲ್ ಟ್ವಟ್ಟರ್ ನಲ್ಲಿ ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೇಂದ್ರದ  ಹೊಸ ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧ  ಪಂಜಾಬ್ ಮತ್ತು ಹರಿಯಾಣ ಮೂಲದ ರೈತರು ರಾಷ್ಟ್ರ ರಾಜಧಾನಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ ಹೃದಯಾಘಾತದಿಂದ ನಿಧನ

Spread the loveಬೆಂಗಳೂರು/ ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ