ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನುಪಮವಾಗಿದೆ ಎಂದು ವಿಶ್ರಾಂತ ಪ್ರೋ ಚಂದ್ರಶೇಖರ್ ಅಕ್ಕಿ ಹೇಳಿದರು
ರವಿವಾರದಂದು ನಗರದ ಬಸವ ತಸ್ಸಂಗ ಸಮಿತಿ ಸಭಾಂಗಣದಲ್ಲಿ ಭಾವಯಾನ ಮಹಿಳಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಬಸವ ತಸ್ಸಂಗ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು
ಮಹಿಳಾ ಸಾಹಿತ್ಯ ಕ್ಷೇತ್ರ ಇಂದು ವಿಸ್ತಾರಗೊಂಡಿದೆ. ವೈಚಾರಿಕ ಮತ್ತು ವೈವಿಧ್ಯಮಯ ಸಾಹಿತ್ಯ ಓದುಗರನ್ನು ತಲುಪುವ ಮೂಲಕ ಅವರನ್ನು ಚಿಂತನಶೀಲರನ್ನಾಗಿಸಿ ಜಾಗೃತಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸೋಮಶೇಖರ್ ಎಸ್ ಮುರಗೋಡ , ಗುರುಪಾದಪ್ಪ ಮುರಗೋಡ , ಪ್ರೋ ವಸಂತರಾವ ಕುರಕರ್ಣಿ , ಮಹಾಲಿಂಗ ಮಂಗಿ , ಈಶ್ವರಚಂದ್ರ ಬೆಟಗೇರಿ ಸೇರಿದಂತೆ ಇತರರು ಇದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News
Laxmi News 24×7