ನವದೆಹಲಿ, ನ.27- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 43,082 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ 87,18,517 ಸೋಂಕಿತರು ಗುಣಮುಖರಾಗಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.93.64ಕ್ಕೆ ಹೆಚ್ಚಳವಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 492 ಮಂದಿ ಸೋಂಕಿಗೆ ಬಲಿಯಾಗುವ ಮೂಲಕ ಸಾವಿನ ಪ್ರಮಾಣ 1,35,715ಕ್ಕೆ ಏರಿಕೆಯಾಗಿದೆ.
ಇದುವರೆಗೂ ದೇಶದ್ಯಾಂತ ಸುಮಾರು 14 ಕೋಟಿ ಮಂದಿಯನ್ನು ರೋಗ ತಪಸಾಣೆಗ ಒಳಪಡಿಸಲಾಗಿದ್ದು, ನಿನ್ನೆ ಒಂದೆ ದಿನ 11,31,204 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮೂಲಗಳು ಉಲ್ಲೇಖಿಸಿವೆ.
Laxmi News 24×7