Home / Uncategorized / 2021ನೇ ಸಾಲಿನ ಸರ್ಕಾರಿ ರಜೆಗಳನ್ನು ಘೊಷಣೆ ಮಾಡಿ ಆದೇಶ

2021ನೇ ಸಾಲಿನ ಸರ್ಕಾರಿ ರಜೆಗಳನ್ನು ಘೊಷಣೆ ಮಾಡಿ ಆದೇಶ

Spread the love

ಬೆಂಗಳೂರು,ನ.21- ರಾಜ್ಯ ಸರ್ಕಾರ 2021ನೇ ಸಾಲಿನ ಸರ್ಕಾರಿ ರಜೆಗಳನ್ನು ಘೊಷಣೆ ಮಾಡಿ ಆದೇಶ ಹೊರಡಿಸಿದೆ. ತಿಂಗಳ 2ನೇ ಶನಿವಾರ, 4ನೇ ಶನಿವಾರ ಸೇರಿದಂತೆ 20 ಸಾವ್ರರ್ತಿಕ ರಜಾ ದಿನಗಳು ಹಾಗೂ 19 ಪರಿಮಿತಿ ರಜಾ ದಿನಗಳೆಂದು ಘೋಷಣೆ ಮಾಡಿದೆ.

ಜನವರಿ 14 ಮಕರ ಸಂಕ್ರಾಂತಿ, ಜ.26 ಗಣರಾಜ್ಯೋತ್ಸವ, ಮಾ.11ರಂದು ಮಹಾಶಿವರಾತ್ರಿ, ಏಪ್ರಿಲ್4 ಗುಡ್‍ಫ್ರೈಡೇ, ಏ.13 ಯುಗಾದಿ, ಏ.14 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮೇ 1 ಕಾರ್ಮಿಕರ ದಿನಾಚರಣೆ, ಮೇ 14 ಬಸವ ಜಯಂತಿ, ಜುಲೈ 21 ಬಕ್ರಿದ್, ಆಗಸ್ಟ್ 20 ಮೊಹರಂ ಕಡೆದಿನ, ಸೆಪ್ಟೆಂಬರ್ 10 ವರಸಿದ್ದಿ ವಿನಾಯಕ, ಅಕ್ಟೋಬರ್ 2 ಗಾಂ ಜಯಂತಿ, ಅ.6 ಮಹಾಲಯ ಅಮಾವಾಸ್ಯೆ,

ಅ.14 ಮಹಾನವಮಿ, ಆಯುಧ ಪೂಜೆ, ಅ.15 ವಿಜಯದಶಮಿ, ಅ.20 ಮಹರ್ಷಿ ವಾಲ್ಮೀಕಿ ಜಯಂತಿ, ನ.1 ಕನ್ನಡ ರಾಜ್ಯೋತ್ಸವ, ನ.3ರಂದು ನರಕ ಚತುದರ್ಶಿ, ನ.5 ಬಲಿಪಾಡ್ಯಮಿ, ದೀಪಾವಳಿ, ನ.22 ಕನಕದಾಸ ಜಯಂತಿ ಇವುಗಳನ್ನು ಸಾರ್ವತ್ರಿಕ ರಜೆ ಎಂದು ಘೋಷಿಸಲಾಗಿದೆ.

ಪರಿಮಿತಿ ರಜಾದಿನಗಳು: ಜನವರಿ 1 ನೂತನ ವರ್ಷಾರಂಭ, ಮಾರ್ಚ್ 30 ಷಬ್-ಎ-ಬರಾತ್, ಏಪ್ರಿಲ್ 3 ಹೋಲಿ ಶನಿವಾರ, ಏ.17 ದೇವರ ದಾಸಿಮಯ್ಯ ಜಯಂತಿ, ಏ.21 ಶ್ರೀರಾಮನವಮಿ, ಮೇ 7 ಜುಮಾತ್-ಉಲ್-ವಿದಾ, ಮೇ 10 ಷಬ್-ಎ-ಖದರ್, ಮೇ 17 ಶಂಕರಾಚಾರ್ಯ ಜಯಂತಿ, ಮೇ 26 ಬುದ್ದ ಪೂರ್ಣಿಮೆ, ಆ.20 ವರಮಹಾಲಕ್ಷ್ಮಿ ವ್ರತ, ಆ. 21 ಓಣಂ, ಆ. 23 ಬ್ರಹ್ಮರ್ಷಿ ನಾರಾಯಣಗುರು ಜಯಂತಿ.ಸೆಪ್ಟೆಂಬರ್ 9 ಸ್ವರ್ಣಗೌರಿ ವ್ರತ, ಸೆ.17 ವಿಶ್ವಕರ್ಮ ಜಯಂತಿ, ಅಕ್ಟೋಬರ್ 18 ತುಲಾ ಸಂಕ್ರಮಣ, ನವೆಂಬರ್ 19 ಗುರುನಾನಕ್ ಜಯಂತಿ, ನ.20 ಪುತರಿ ಹಬ್ಬ, ಡಿಸೆಂಬರ್ 25 ಕ್ರಿಸ್‍ಮಸ್ ಈವ್.


Spread the love

About Laxminews 24x7

Check Also

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

Spread the love ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ