Breaking News

ಯುವತಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ: ಚಾಮರಾಜಪೇಟೆ ಸಬ್​​ಇನ್​ಸ್ಪೆಕ್ಟರ್ ಅಮಾನತು

Spread the love

ಬೆಂಗಳೂರು  : ಲ್ಯಾಪ್​​ಟಾಪ್ ಕಳ್ಳತನವಾಗಿದೆ ಎಂದು ದೂರು ನೀಡಿದ ಯುವತಿಯನ್ನು ಚಾಮರಾಜಪೇಟೆ ಸಬ್​​ಇನ್​ಸ್ಪೆಕ್ಟರ್ ವಿಶ್ವನಾಥ್ ಆತ್ಯಾಚಾರ ಮಾಡಿದ ಆರೋಪದಡಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅಮಾನತುಗೊಳಿಸಿದ್ದಾರೆ.

ಕಳೆದ ಆಗಸ್ಟ್ 8ರಂದು ಲಾಪ್ ಟ್ಯಾಪ್ ಕಳ್ಳತನವಾಗಿದೆ ಎಂದು ಆರೋಪಿಸಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಯುವತಿಯೊಬ್ಬರು ದೂರು‌ ನೀಡಿದ್ದರು. ಸಬ್​​ಇನ್​​ಸ್ಪೆಕ್ಟರ್ ವಿಶ್ವನಾಥ್ ಎಂಬುವರು ತನಿಖೆ ಕೈಗೊಂಡು, ತನಿಖೆ ಸೋಗಿನಲ್ಲಿ ಪ್ರತಿ‌ ದಿನ ನನಗೆ ಕರೆ ಮಾಡಿ ಚಾಟ್ ಮಾಡುತ್ತಿದ್ದರು. 12 ಲಕ್ಷ ಹಣ ನೀಡುವಂತೆ ಕೇಳಿದ್ದರು. ಅಲ್ಲದೇ ಪ್ರೀತಿಸುತ್ತೇನೆ ಎಂದು ದುಂಬಾಲು ಬಿದ್ದಿದ್ದರು ಎಂದು ಯುವತಿ ಆರೋಪಿಸಿದ್ದಾಳೆ.

ಒಂದು ದಿನ ಲ್ಯಾಪ್​​ಟಾಪ್ ಸಿಕ್ಕಿದೆ ಎಂದು ಕರೆ ಮಾಡಿ ಪ್ರೀತಿಸುವಂತೆ ಬಲತ್ಕಾರಕ್ಕೆ ಯತ್ನಿಸಿದ್ದರು.

ಇದಕ್ಕೆ ಆಕ್ಷೇಪಿಸಿ ಮದುವೆಯಾಗುವಂತೆ ಹೇಳಿದ್ದೆ. ಅದರಂತೆ ನ.9 ರಂದು ಸಂಜೆ ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಳ್ಳಲು ಸಿದ್ದತೆ ನಡೆಸಿ ರೈಲು ಮಾರ್ಗವಾಗಿ ಇಬ್ಬರು ಪ್ರಯಣಿಸಿದ್ದೆವು.

ಮಾರನೇ ದಿನ ಧರ್ಮಸ್ಥಳದ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ವಿಶ್ವನಾಥ್ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಸಬ್​​ಇನ್​​ಸ್ಪೆಕ್ಟರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಪ್ರತಿದೂರು ನೀಡಿರುವ ವಿಶ್ವನಾಥ್, ಲ್ಯಾಪ್ ಟಾಪ್ ಕಳ್ಳತನ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು ನಿಜ. ಪ್ರಕರಣದ ತನಿಖೆ ನಾನೇ ನಡೆಸುತ್ತಿದ್ದು ನಿಜ. ನನ್ನ ಮೊಬೈಲ್ ನಂಬರ್ ಪಡೆದು ನಿತ್ಯ ಯುವತಿ ಕರೆ ಮಾಡುತ್ತಿದ್ದಳು. ನ.8ರಂದು ಕರೆ ಮಾಡಿ ಲ್ಯಾಪ್ ಟಾಪ್ ಕಳ್ಳತನ ಬಗ್ಗೆ ಮಾಹಿತಿ ಸಿಕ್ಕಿದೆ.‌ ಬಸವನಗುಡಿಯಲ್ಲಿರುವ ಮ್ಯಾಕ್ ಡೊನಾಲ್ಡ್​​ಗೆ ಬನ್ನಿ ಎಂದು ನನ್ನನ್ನು ಕರೆಯಿಸಿಕೊಂಡಿದ್ದಳು‌.

ಮದುವೆಯಾಗದಿದ್ದರೆ ಡೆತ್​​ನೋಟ್ ಬರೆದು ಸಾಯುವುದಾಗಿ ಬೆದರಿಸಿದ್ದಳು. ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ 10 ಲಕ್ಷ ರೂ.ನೀಡದಿದ್ದರೆ ರೇಪ್ ಕೇಸ್ ಹಾಕಿ ಕೆಲಸದಿಂದ‌ ತೆಗೆದು ಹಾಕಿಸುತ್ತೇನೆ‌. ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯುವ ಹಾಗೇ ಮಾಡುತ್ತೇನೆ‌ ಎಂದು ಧಮಕಿ ಹಾಕಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಳು‌ ಎಂದು ವಿಶ್ವನಾಥ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ‌.
ವರದಿ ಆಧಾರದ ಮೇಲೆ ಸಬ್​​ಇನ್‌ಸ್ಪೆಕ್ಟರ್ ವಿಶ್ವನಾಥ್​ ಅವ​ನನ್ನು ಅಮಾನತು ಮಾಡಲಾಗಿದೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ