ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನವೆಂಬರ್ 18 ರಿಂದ ಶಿಕ್ಷಕರ ವರ್ಗಾವಣೆಯ ಪ್ರಕ್ರಿಯೆ ಆರಂಭವಾಗಲಿದೆ.
ನವೆಂಬರ್ 18 ರಿಂದ 30 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಜನವರಿ 4 ರಿಂದ ಮೂರು ಹಂತದ ಕೌನ್ಸಲಿಂಗ್ ನಡೆಯಲಿದೆ. ಮಾರ್ಚ್ ಮಧ್ಯಂತರದ ವರೆಗೆ ಮುಂದುವರೆಯಲಿದೆ.
ಈ ವರ್ಷ ಲಕ್ಷಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಲಿದ್ದಾರೆ. ಇವರಲ್ಲಿ ಶೇ. 7 ರಷ್ಟು ಶಿಕ್ಷಕರು ಮಾತ್ರ ವರ್ಗಾವಣೆಗೊಳ್ಳಲಿದ್ದಾರೆ. ಇನ್ನು ಮುಂದೆ ಕಡ್ಡಾಯ ವರ್ಗಾವಣೆ ರದ್ದುಪಡಿಸಲಾಗಿದ್ದು, ಕಳೆದ ವರ್ಷ ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರಿಗೆ ಹಿಂದಿನ ಸ್ಥಳಕ್ಕೆ ಮರು ನಿಯೋಜನೆ ಮಾಡುವ ಪ್ರಕ್ರಿಯೆಗೂ ಇದೊಂದು ಬಾರಿ ಅವಕಾಶ ಕಲ್ಪಿಸಲಾಗಿದೆ.