ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಪೂರ್ತಿ ಮೆಂಟಲ್ ಆಗಿಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಮಾತಾನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅಲ್ಲದೆ ಮುಖ್ಯಮಂತ್ರಿ ಹುದ್ದೆಗೆ ವೆಕೆನ್ಸಿ ಇಲ್ಲ ಮತ್ತು ಮುಖ್ಯಮಂತ್ರಿ ಬದಲಾವಣೆ ಎನ್ನೋದು ಪಕ್ಷದ ಆಂತರಿಕ ಚರ್ಚೆ ಅಲ್ಲ. ಮುಂದೆಯೂ ಯಡಿಯೂರಪ್ಪ ಅವರೇ ಸಿಎಂ ಅಗಿ ಮುಂದುವರೆಯುತ್ತಾರೆ ಎಂದರು. ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಅವರಿಗೆ ಹುದ್ದೆಯನ್ನು ಉಳಿಸಿಕೊಳ್ಳುವುದೇ ಈಗ ಕಷ್ಟವಾಗಿದೆ. ಆದರೆ ಅವರು ನಮ್ಮ ದೇಶ ಮತ್ತು ಪಕ್ಷದ ಬಗ್ಗೆ ಮಾತಾನಾಡುಲು ಬರುತ್ತಾರೆ ಎಂದು ತಿರುಗೇಟು ನೀಡಿದರು.
Laxmi News 24×7