Breaking News

ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಈ ಸೌಲಭ್ಯ ಪಡೆಯಲು ನವೆಂಬರ್ 12 ಕೊನೆ ದಿನ

Spread the love

ಬೆಂಗಳೂರು: ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಈ ಸೌಲಭ್ಯ ಪಡೆಯಲು ನವೆಂಬರ್ 12 ಕೊನೆ ದಿನವಾಗಿದೆ ಎಂದು ಹಿಂದುಸ್ತಾನ್ ಸಮಾಚಾರ್ ವರದಿ ಮಾಡಿದೆ.
ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರವರೆಗೆ ಬಡ್ಡಿ ರಹಿತ ಸಾಲ ದೊರೆಯುತ್ತದೆ. ಈ ಹಿಂದಿನ ಅವಧಿಯಲ್ಲಿ ಸುಮಾರು 408 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಚೀಟಿ ನೀಡಲಾಗಿದೆ.

ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ, ಪಾನೀಯ ಮಾರಾಟ ಮಾಡುವವರು, ಮನೆ ಮನೆಗೆ ತೆರಳಿ ತರಕಾರಿ, ಹೂವು ಮಾರುವವರು, ರಸ್ತೆ ಬಳಿಯ ತಳ್ಳುಬಂಡಿ, ಆಟೋಗಳಲ್ಲಿ ತಿಂಡಿ, ಊಟ ಹಾಗೂ ಬುಟ್ಟಿ ವ್ಯಾಪಾರಿಗಳು ಈ ಸಾಲ ಸೌಲಭ್ಯ ಪಡೆಯಬಹುದು. ಹಾಗೂ ಮಾರಾಟ, ಆಟದ ವಸ್ತು, ಗೃಹೋಪಯೋಗಿ ವಸ್ತು ಮಾರಾಟಗಾರರು ಈ ಯೋಜನೆಗೆ ಒಳಪಡುತ್ತಾರೆ.
ಪಾಲಿಕೆ ವ್ಯಾಪ್ತಿಯ ಬೀದಿ ವ್ಯಾಪಾರಿಗಳು ಈ ಸೌಲಭ್ಯ ಪಡೆಯಲು, ಇತ್ತೀಚಿನ 2 ಭಾವಚಿತ್ರ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್ ಹಾಗು ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕು.


Spread the love

About Laxminews 24x7

Check Also

ಬಾಲಕಿಗೆ ಲೈಂಗಿಕ ಕಿರುಕುಳ; ಇಬ್ಬರು ಆಟೋ ಚಾಲಕರ ಬಂಧನ

Spread the loveದಾವಣಗೆರೆ: ಆಟೋ‌ ಚಾಲಕರಿಬ್ಬರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಆರ್​ಎಂಸಿ ಯಾರ್ಡ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ