Breaking News

ಮತ್ತೆ ಒಂದಾದ ಸಲ್ಮಾನ್-ಶಾರುಖ್

Spread the love

ಮುಂಬೈ, – ಜೀರೋ ಚಿತ್ರದ ನಂತರ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಬಾಲಿವುಡ್‍ನ ಬಾದ್‍ಷಾ ಶಾರುಖ್‍ಖಾನ್ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದು ಸಲ್ಮಾನ್‍ಖಾನ್ ಕೂಡ ಆ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟಿದೆ.

ಶಾರುಕ್ ಹಾಗೂ ಸಲ್ಮಾನ್ ನಡುವೆ ಆಗಾಗ್ಗೆ ವಿವಾದಗಳಿ ದ್ದರೂ ಕೂಡ ಅವರಿಬ್ಬರಲ್ಲಿ ಉತ್ತಮ ಗೆಳೆತನವಿರುವುದರಿಂದ ಹಲವು ಚಿತ್ರಗಳಲ್ಲಿ ಒಂದಾಗಿ ನಟಿಸಿದ್ದು ಬಹುತೇಕ ಚಿತ್ರಗಳು ಯಶಸ್ವಿಯಾಗಿದೆ. ಶಾರುಖ್‍ಖಾನ್ ಈಗ ಗೆಲುವಿನ ಅವಶ್ಯಕತೆಯಿರುವುದರಿಂದ ಪಠಾಣ್ ಚಿತ್ರದಲ್ಲಿ ಸಲ್ಮಾನ್‍ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಶಾರುಖ್ ನಟಿಸಿದ್ದ ಕೊನೆಯ ಚಿತ್ರವಾದ ಜೀರೋದಲ್ಲೂ ಸಲ್ಮಾನ್‍ಖಾನ್ ಅತಿಥಿ ನಟನಾಗಿ ನಟಿಸಿದ್ದು ಶಾರುಖ್‍ನೊಂದಿಗೆ ಗೀತೆಯೊಂದರಲ್ಲಿ ಕಾಣಿಸಿಕೊಂಡು ಬೊಂಬಾಟ್ ಸ್ಟೆಪ್ಸ್ ಹಾಕಿದ್ದರು. ಪಠಾಣ್ ಸಿನಿಮಾದಲ್ಲಿ ಕನ್ನಡತಿ ದೀಪಿಕಾಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದು ಈ ಜೋಡಿ ನಟಿಸಿದ್ದ ಚೆನ್ನೈಎಕ್ಸ್‍ಪ್ರೆಸ್, ಓಂ ಶಾಂತಿ ಓಂ ಸಿನಿಮಾಳಲ್ಲೂ ಯಶಸ್ವಿಯಾಗಿದ್ದರಿಂದ ಈ ಚಿತ್ರದಲ್ಲಿ ಶಾರುಖ್ ಎದುರು ದೀಪಿಕಾರನ್ನೇ ನಾಯಕಿಯಾಗಿ ನಿರ್ಮಾಪಕರು ಆಯ್ಕೆ ಮಾಡಿಕೊಂಡಿದ್ದಾರೆ. ಜಾನ್‍ಅಬ್ರಹಾಂ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಶಾರುಖ್‍ಖಾನ್ ಹಾಗೂ ಸಲ್ಮಾನ್ ಖಾನ್ ಮೊದಲ ಬಾರಿಗೆ ಕರಣ್ ಅರ್ಜುನ್‍ನಲ್ಲಿ ಕಾಣಿಸಿಕೊಂಡಿದ್ದರು ಆ ಚಿತ್ರವು ಬಾಕ್ಸ್‍ಆಫೀಸ್‍ನಲ್ಲಿ ಸಕ್ಸಸ್ ಆಗಿತ್ತು. ನಂತರ ಕುಚ್ ಕುಚ್ ಹೋತಾ ಹೈ ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಸ್ಟಾರ್ ನಟರುಗಳು ನಟಿಸಿದ್ದರು. ಶಾರುಖ್‍ಖಾನ್ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದು ಖ್ಯಾತ ನಿರ್ದೇಶಕ ಅಟ್ಟಿಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ