Breaking News

ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೋಮನ್ ಬೀಚಿನಲ್ಲಿ ಬೆತ್ತಲೇ ಫೋಟೋ ಶೂಟ್

Spread the love

ಪಣಜಿ: ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೋಮನ್ ಬೀಚಿನಲ್ಲಿ ಬೆತ್ತಲೇ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ 55ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಮಾಡೆಲ್ ಮಿಲಿಂದ್ ತನ್ನ 55ನೇ ವಯಸ್ಸಿನಲ್ಲೂ ಕೂಡ ಯುವಕರು ನಾಚುವಂತೆ ಬಾಡಿಯನ್ನು ಮಾಡಿದ್ದಾರೆ. ಈಗಲೂ ಕೂಡ ಸಿಕ್ಸ್ ಪ್ಯಾಕ್ ಮಾಡುತ್ತಾರೆ. ಇಂದು 55ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರು ಗೋವಾದ ಬೀಚಿನಲ್ಲಿ ಬೆತ್ತಲೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿ

ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಬೆತ್ತಲೆ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮಿಲಿಂದ್, ನನಗೆ ಹುಟ್ಟುಹಬ್ಬದ ಶುಭಾಶಯಗಳು 22 ವರ್ಷ ರನ್ನಿಂಗ್ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಈ ಫೋಟೋವನ್ನು ತಮ್ಮ ಪತ್ನಿ ಅಂಕಿತಾ ಕೊನ್ವಾರ್ ತೆಗೆದಿದ್ದು ಎಂದು ಬರೆದುಕೊಂಡಿದ್ದಾರೆ. ಸದ್ಯ ಮಿಲಿಂದ್ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮಿಲಿಂದ್ ಅವರ ಈ ರೀತಿ ಫೋಟೋಶೂಟ್ ಮಾಡಿಸುತ್ತಿರುವುದು ಇದೇ ಮೊದಲೇನಲ್ಲ, 90 ದಶಕದಲ್ಲೇ ಟಫ್ ಶೂ ಜಾಹೀರಾತಿಗಾಗಿ ಮಾಜಿ ಮಿಸ್ ಇಂಡಿಯಾ ಮಧು ಸಪ್ರೆ ಜೊತೆ ನಗ್ನವಾಗಿ ಪೋಸ್ ನೀಡಿದ್ದರು. ಅಂದು ಇದು ಬಹಳ ಚರ್ಚೆಯಾಗಿತ್ತು. ಜೊತೆಗೆ ಈ ವಿಚಾರವಾಗಿ ಕೇಸ್ ಕೂಡ ದಾಖಲಾಗಿತ್ತು. ಮಿಲಿಂದ್, ಮಧು ಸಪ್ರೆ, ಛಾಯಾಗ್ರಾಯಕ ಮತ್ತು ಪಬ್ಲಿಶರ್ ಎಲ್ಲರೂ ಈ ಪ್ರಕರಣದಲ್ಲಿ 14 ವರ್ಷ ಕೋರ್ಟ್‍ಗೆ ಅಲೆದಿದ್ದರು. ತದನಂತರ ಪ್ರಕರಣ ಖುಲಾಸೆಯಾಗಿತ್ತು.

ದ್ದಾರೆ

 


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ