Breaking News

ಪ್ರಿಯಾಂಕಾ ರಾಧಾಕೃಷ್ಣನ್ (41) ನ್ಯೂಜಿಲೆಂಡ್‍ನ ಭಾರತೀಯ ಮೂಲದ ಪ್ರಥಮ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

Spread the love

ಮೆಲ್ಬೋರ್ನ್, ನ.2- ಪ್ರಿಯಾಂಕಾ ರಾಧಾಕೃಷ್ಣನ್ (41) ನ್ಯೂಜಿಲೆಂಡ್‍ನ ಭಾರತೀಯ ಮೂಲದ ಪ್ರಥಮ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸ್ಸಿಂಡಾ ಅಡ್ರ್ರೆನ್ ಅವರು ತಮ್ಮ ಸಂಪುಟಕ್ಕೆ ಐವರು ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದು , ಇವರಲ್ಲಿ ಪ್ರಿಯಾಂಕಾ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.ಪ್ರಿಯಾಂಕಾ ಭಾರತದಲ್ಲಿ ಜನಿಸಿ ನಂತರ ಸಿಂಗಾಪೂರ್‍ನಲ್ಲಿ ಶಿಕ್ಷಣ ಪಡೆದರು. ತರುವಾಯ ನ್ಯೂಜಿಲೆಂಡ್‍ನಲ್ಲಿ ಕಾನೂನು ಶಿಕ್ಷಣದಲ್ಲಿ ಉನ್ನತ ಪದವಿ ಪಡೆದರು. ಶೋಷಿತ ಮಹಿಳೆಯರು, ದುರ್ಬಲರು, ವಲಸಿಗರು, ಮೊದಲಾದ ಸೂಕ್ಷ್ಮ ವರ್ಗಗಳ ಪರ ವಕೀಲೆಯಾಗಿ ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಿಯಾಂಕಾ ಮಹತ್ವದ ಪಾತ್ರ ವಹಿಸಿದ್ದರು.

2017ರಲ್ಲಿ ಲೇಬರ್ ಪಕ್ಷದಿಂದ ಇವರು ಸಂಸತ್ ಸದಸ್ಯರಾಗಿ ಆಯ್ಕೆ ಯಾದರು. ಅತ್ಯಂತ ದಕ್ಷ ಮತ್ತು ಸಮರ್ಥ ಕಾರ್ಯ ನಿರ್ವಹಣೆಯಿಂದ ಹಂತ ಹಂತವಾಗಿ ಪದೋನ್ನತಿ ಪಡೆದು 2019ರಲ್ಲಿ ಜನಾಂಗೀಯ ಸಮುದಾಯಗಳ ಸಚಿವರಿಗೆ ಸಂಸತ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಪ್ರಿಯಾಂಕಾ ಅವರ ಕಾರ್ಯ ಕ್ಷಮತೆ ಮತ್ತು ನಾಯಕತ್ವ ಗುಣವನ್ನು ಮೆಚ್ಚಿ ನ್ಯೂಜಿಲೆಂಡ್ ಪ್ರಧಾನಿ ಅವರಿಗೆ ಸಚಿವ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ಸಂಪುಟದಲ್ಲಿ ಈವರೆಗೆ ಯಾವ ಭಾರತೀಯರೂ ಕೂಡ ಸಚಿವ ಸ್ಥಾನ ಅಲಂಕರಿಸಿಲ್ಲ. ಹೀಗಾಗಿ ಇದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ