Breaking News

ಉಪಚುನಾವಣೆಯ ಹಿನ್ನೆಲೆಯಲ್ಲಿ ಮುನಿರತ್ನ ಪರ ನಟ ದರ್ಶನ್ ಪ್ರಚಾರಕ್ಕೆ ಆಗಮಿಸಿದರು. ನಾನು ಯಾವುದೇ ಪಕ್ಷ ನೋಡಿ

Spread the love

ಬೆಂಗಳೂರು: ನವೆಂಬರ್​ 3ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮುನಿರತ್ನ ಪರ ನಟ ದರ್ಶನ್ ಪ್ರಚಾರಕ್ಕೆ ಆಗಮಿಸಿದರು. ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಹೋಗಲ್ಲ. ವ್ಯಕ್ತಿ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಬಂದಿದ್ದೀನಿ ಎಂದು ದರ್ಶನ್ ಹೇಳಿದರು. ಹಾಗಾಗಿ, ಮುನಿರತ್ನ ಪರ ಸ್ಯಾಂಡಲ್​ವುಡ್ ‘ಚಕ್ರವರ್ತಿ’ ಮತಯಾಚಿಸಿದರು. ಆರ್​.ಆರ್​. ನಗರದ ‘ಕುರುಕ್ಷೇತ್ರ’ದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರಕ್ಕೆ ಇಳಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹಾಗೂ ನಟಿ ಅಮೂಲ್ಯ ಬಗ್ಗೆ ಶಿವಸ್ವಾಮಿ ನುಣ್ಣೂರು (ಟಿವಿ9- ಬುಲೆಟಿನ್​ ಪ್ರೊಡ್ಯೂಸರ್) ಅವರು ವೃತ್ತಿ ಸಹಜವಾಗಿ ತಮ್ಮದೇ ಶೈಲಿಯಲ್ಲಿ ಕವನವೊಂದನ್ನು ರಚಿಸಿದ್ದಾರೆ.

‘ಭೂಪತಿ’ ಅಖಾಡಕ್ಕಿಳಿಯುತ್ತಿದ್ದಂತೆ ‘ರಾ..ರಾ..’ ಪ್ರಚಾರಕ್ಕೆ ರಂಗು
ಮತದಾರರ ಬಳಿ ‘ದಾಸ’ನಾಗಿ ‘ಚಿಂಗಾರಿ’ ಮತಬೇಟೆ
‘ರಾಜೇಶ್ವರಿ’ ಒಲಿಯಲು ‘ನವಗ್ರಹ’ ಸುತ್ತಿದ ‘ರಾಬರ್ಟ್’
ಮುನಿರತ್ನ ಪಾಲಿಗೆ ‘ಸುಯೋಧನ’ನಾಗಿ ಬಂದ ದರ್ಶನ್
‘ಅಯ್ಯಾ..’ ಎನ್ನುತ್ತಾ ಮಾತು.’ಸ್ವಾಮಿ’ ಎಂದರೂ ಮತ..!

ರಾಜೇಶ್ವರಿ ಕ್ಷೇತ್ರದಲ್ಲಿ ‘ಸುಂಟರಗಾಳಿ’ಯಂತೆ ಕ್ಷೇತ್ರ ಸಂಚಾರ

ಚುನಾವಣೆ ‘ಇಂದ್ರ’ಜಾಲದಲ್ಲಿ ‘ಶಾಸ್ತ್ರಿ’ಯಾಗಿ ಮತಬೇಟೆ
‘ಗಜ’ಪಡೆಗೆ ‘ಸಾರಥಿ’ಯಾಗಿ ಮತಯಾಚಿಸುತ್ತಿರೋ ‘ಐರಾವತ’
‘ಜಗ್ಗುದಾದಾ’ನ ನೋಡಲು ಮುಗಿಬಿದ್ದ ಅಭಿಮಾನಿಗಳು
ಮುನಿರತ್ನ ಪರ ‘ತಾರಕ್​’ಕ್ಕೇರಿದ ‘ಒಡೆಯ’ನ ಆರ್ಭಟ
‘ಮಂಡ್ಯ’ದಂತೆ ಆರ್​.ಆರ್​.ನಗರದಲ್ಲೂ ದರ್ಶನ್​ ಹವಾ

ಮುನಿರತ್ನ ಪರ ‘ಸಿನಿತಾರೆ’ಗಳಿಂದ ಅಬ್ಬರದ ಪ್ರಚಾರ
ಸಾರಥಿ ದರ್ಶನ್ ಬಳಿಕ ನಟಿ ‘ಅಮೂಲ್ಯ’ ಮತಬೇಟೆ
ಆರ್​.ಆರ್​.ನಗರದಲ್ಲಿ ಸಿನಿ ಸ್ಟಾರ್​ಗಳಿಂಮ ಮತಬೇಟೆ ‘ಪರ್ವ’
‘ಚೆಲುವಿನ ಚಿತ್ತಾರ’ದ ಮೂಲಕ ಅಮೂಲ್ಯ ಮತಯಾಚನೆ

‘ಮನಸಾಲಜಿ’ಯಿಂದ ಮತದಾರರನ್ನ ಸೆಳೆಯಲಿರುವ ನಟಿ
‘ಅಮೂಲ್ಯ’ ಪ್ರಚಾರದಿಂದ ಮುನಿಗೆ ಸಿಗುತ್ತಾ ‘ಗಜಕೇಸರಿ’ ಯೋಗ
‘ಖುಷಿ ಖುಷಿಯಾಗಿ..’ ಮತಯಾಚನೆ ಮಾಡಲಿರುವ ‘ಅಮೂಲ್ಯ’
‘ಮುಗುಳು ನಗೆ’ಯ ಮೂಲಕ ವೋಟ್ ಕೇಳುತ್ತಿರುವ ನಟಿ

ಅಭಿಮಾನಿಗಳತ್ತ ಕೈ ಬೀಸಿ ‘ರಾಬರ್ಟ್​’ ಮತ ಶಿಕಾರಿ
ದಚ್ಚು ಕ್ಯಾಂಪೇನ್​ನಿಂದ ಮುನಿರತ್ನಗೆ ಸಿಗುತ್ತಾ ‘ಅಭಯ’
‘ಜೊತೆ ಜೊತೆಯಲ್ಲಿ..’ ದರ್ಶನ್ ಮತ್ತು ಅಮೂಲ್ಯ ಕ್ಯಾಂಪೇನ್
ಮಾನವೀಯತೆಯಿಂದ ‘ನಿನಗೋಸ್ಕರ’ ಪ್ರಚಾರಕ್ಕೆ ಎಂದ ದಚ್ಚು
‘ಬಾಸ್​’ ಅಬ್ಬರದ ಪ್ರಚಾರದಿಂದ ರಂಗೇರಿದ ‘ರಾ..ರಾ..’ ಕಣ
‘ಕುರುಕ್ಷೇತ್ರ’ದಲ್ಲಿ ‘ಅರ್ಜುನ’ನಿಂದ ಮತಬೇಟೆ

‘ಸರ್ದಾರ’ನಿಗೆ ‘ನೀನಂದ್ರೆ ನಂಗಿಷ್ಟ’ ಎಂತಿದ್ದಾರೆ ಜನ
‘ಕಲಾಸಿಪಾಳ್ಯ’ದಿಂದ ಬಂದು ಜಮಾಯಿಸಿದ ಫ್ಯಾನ್ಸ್​
‘ಕಿಟ್ಟಿ’ಯ ನೋಡಲು ‘ಮೆಜೆಸ್ಟಿಕ್​’ನಿಂದಲೂ ಬಂದ ಫ್ಯಾನ್ಸ್​
‘ಚಕ್ರವರ್ತಿ’ಗೆ ಹೂಮಳೆ.. ಮಹಿಳೆಯರಿಂದ ‘ಸಾರಥಿ’ಗೆ ಆರತಿ
ಯಶವಂತಪುರದಿಂದ ದರ್ಶನ್ ‘ವಿರಾಟ’ಪರ್ವ ಶುರು


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ