Breaking News

ನಿವೃತ್ತ ಪ್ರಾಂಶುಪಾಲರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ

Spread the love

ಮೈಸೂರು: ನಿವೃತ್ತ ಪ್ರಾಂಶುಪಾಲರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ ವಿಶ್ವನಾಥ್​​ ಭಟ್​​ ಅವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು ಮೂವರು ಶಿಕ್ಷಕರು ಸೇರಿ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಪ್ಟೆಂಬರ್​ 20ರಂದು ಮೈಸೂರಿನ ಶರದಾದೇವಿ ನಗರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪರಶಿವಮೂರ್ತಿ ಅವರ ಹತ್ಯೆ ಮಾಡಲಾಗಿತ್ತು. ಸದ್ಯ ಆರೋಪಿ ವಿಶ್ವನಾಥ್ ಭಟ್ ಪರಶಿವಮೂರ್ತಿ ಕೊಲೆಗೆ ₹7 ಲಕ್ಷ ಸುಪಾರಿ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ವಿಶ್ವನಾಥ್ ಭಟ್ ಮುಖ್ಯ ಶಿಕ್ಷಕರಾಗಿರುವ ಸಂಸ್ಕೃತ ಪಾಠ ಶಾಲೆ ವ್ಯವಹಾರದಲ್ಲಿ ಕೊಲೆಯಾದ ಪರಶಿವಮೂರ್ತಿ ಹಾಗೂ ವಿಶ್ವನಾಥ್ ನಡುವೆ ವೈಮನಸ್ಸಿತ್ತು ಎನ್ನಲಾಗಿದೆ.

ಇನ್ನು ಆರೋಪಿ ವಿಶ್ವನಾಥ್​ ಕಳೆದ ಕೆಲವು ವರ್ಷಗಳಿಂದ ಪತ್ನಿ ಹಾಗೂ ಮಗಳು ಅನನ್ಯ ಭಟ್​ರಿಂದ ಅಂತರ ಕಾಯ್ದುಕೊಂಡು, ಪ್ರತ್ಯೇಕವಾಗಿ ವಾಸವಿದ್ದಾರೆ.


Spread the love

About Laxminews 24x7

Check Also

ಸಿಡಿಲು ಬಡಿದು ಇಬ್ಬರು ಸಾವು

Spread the love ಕಾರವಾರ(ಉತ್ತರ ಕನ್ನಡ): ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಂಕೋಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ