ಬೆಳಗಾವಿ: ಸಚಿವ ರಮೇಶಜಾರಕಿಹೊಳಿ ಅವರಿಗೆ ಕಿಂಗ್ ಆಗುವ ಅವಕಾಶವಿತ್ತು. ಆದ್ರೆ ಅವರು ಕಿಂಗ್ ಮೇಕರ್ ಆಗಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿನ ಸುವರ್ಣಸೌಧ ಎದುರು ಲಿಂಗಾಯತ ಸಮುದಾಯವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಸತ್ಯಾಗ್ರಹ ವೇಳೆ ಮನವಿ ಸ್ವೀಕರಿಸಲು ಸ್ಥಳಕ್ಕೆ ಸಚಿವರು ಬಂದಿದ್ದ ವೇೆಳೆ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ರಮೇಶ ಜಾರಕಿಹೊಳಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಇದನ್ನು ಅವರ ಪಕ್ಷದವರು ಕೂಡ ಒಪ್ಪುತ್ತಾರೆ ಎಂದರು.
ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಜಾರಿಯಲ್ಲಿದೆ. ಆಶ್ವಾಸನೆ ಕೊಡಲು ಬರುವುದಿಲ್ಲ. ಆದರೆ ಸಮಾಜದೊಂದಿಗೆ ನಾವು ಇದ್ದೇವೆ. ಎಲ್ಲ ಸಮಾಜದ ಬಗ್ಗೆ ಕಳಕಳಿ ಇರುವ ಸ್ವಾಮೀಜಿ. ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.
Laxmi News 24×7