
ಬೆಳಗಾವಿ- ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಗ್ಯಾಂಗ್ ವಾಡಿ ಪ್ರದೇಶದಲ್ಲಿ ನಡೆದ ಭಯನಾಕ ಮರ್ಡರ್ ಹಿಂದೆ,ಹಳೆಯ ವೈಷಮ್ಯ,ಸೇಡು ಎಲ್ಲವೂ ಅಡಗಿದೆ.
ನಿನ್ನೆ ಮದ್ಯರಾತ್ರಿ ಬೆಳಗಾವಿಯಲ್ಲಿ ಶಹಬಾಜ್ ಪಠಾಣ್,ಉರ್ಫ ಶಹಬಾಜ್ ರೌಡಿ ಎಂಬಾತನ ಕೊಲೆ ಮಾಡಲಾಗಿತ್ರು,ಈ ಕೊಲೆಗೆ ಹಳೆಯ ವೈಷಮ್ಯವೇ ಕಾರಣ ಎಂಬುದು ಗೊತ್ತಾಗಿದೆ, ಬೈಕ್ ಮೇಲೆ ಸಾಗುವಾಗ ಸಿಡಿದ ರಾಡಿಯಿಂದ ಆರಂಭವಾದ ಈ ಜಗಳ ನಿನ್ನೆ ಮಿಡ್ ನೈಟ್ ಕೊನೆಯಲ್ಲಿ ಅಂತ್ಯವಾಗಿದೆ.
ಮುತ್ಯಾನಟ್ಟಿಯ ಯುವಕನೊಬ್ಬ ಬೈಕ್ ಮೇಲೆ ಹೋಗುವಾಗ ಶಹಬಾಜ್ ರೌಡಿಗೆ ರಾಡಿ ಸಿಡಿದಿತ್ತು,ಆಗ ಈ ಶಹಬಾಜ್ ರೌಡಿ ,ಮುತ್ಯಾನಟ್ಟಿಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ,ಮುತ್ಯಾನಟ್ಟಿಯ ಯುವಕ ಆಸ್ಪತ್ರೆ ಸೇರಿದರೆ,ಶಹಬಾಜ್ ಜೇಲಿಗೆ ಹೋಗಿದ್ದ .
ಮಾರಣಾಂತಿಕ ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮುತ್ಯಾನಟ್ಟಿಯ ಆ ಯುವಕ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದ,ಜೇಲಿಗೆ ಹೋಗಿದ್ದ ಶಹಬಾಜ್ ಪಠಾಣ್ ಕೂಡಾ ಜಾಮೀನು ಪಡೆದು ಹೊರಗೆ ಬಂದಿದ್ದ,ಆದ್ರೆ ದ್ವೇಷ,ವೈಷಮ್ಯ,ಹಾಗೆಯೇ ಉಳಿದಿತ್ತು.
ಶಹಬಾಜ್ ರೌಡಿ ಮತ್ತು ,ಮುತ್ಯಾನಟ್ಟಿಯ ಆ ಯುವಕನ ನಡುವೆ ನಡೆದ ರಾಡಿ ಜಗಳ ಕಾಕತಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿತ್ತು,ಇದಾದ ಬಳಿಕ ಮುತ್ಯಾನಟ್ಟಿಯ ಹುಡುಗರು ಮತ್ತು ಶಹಬಾಜ್ ರೌಡಿ ಹುಡುಗರನ್ನು ಕಾಂಪ್ರೋಮೈಸ್ ಮಾಡಿಸುವ ಪ್ರಯತ್ನವೂ ಹಲವಾರು ಬಾರಿ ನಡೆದಿತ್ತು ಆದ್ರೆ ಅದು ಸಕ್ಸೆಸ್ ಆಗಿರಲಿಲ್ಲ.
ನಿನ್ಮೆ ರಾತ್ರಿ ಶಹಬಾಜ್ ರೌಡಿ ಪಾರ್ಟಿ ಮಾಡಲು ಹೋಗಿದ್ದ ಈ ಮಾಹಿತಿ ಪಡೆದ ಇವನ ವೈರಿಗಳು ಬೆಳಗಾವಿಯ ಶೇಖ್ ಹೋಮಿಯೋಪತಿ ಮೆಡಿಕಲ್ ಕಾಲೇಜ್ ಬಳಿ ಇವನ ಮೇಲೆ ಅಟ್ಯಾಕ್ ಮಾಡಿದ್ದಾರೆ, ಆಗ ಶಹಬಾಜ್ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ,ಓಡುತ್ತ,ಓಡುತ್ತ ಆತ ನಿವೃತ್ತ ಡಿ ವೈ ಎಸ್ ಪಿ ಬಸವರಾಜ್ ಯಲಿಗಾರ್ ಮನೆ ಸೇರಿದ್ದಾನೆ,ಶಹಬಾಜ್ ನನ್ನು ಬೆನ್ನಟ್ಟಿ ಬಂದ ಆತನ ವಿರೋಧಿಗಳು ನಿವೃತ್ತ ಪೋಲೀಸ್ ಅಧಿಕಾರಿಯ ಮನೆಯಲ್ಲೇ ಆತನನ್ನು ಖತಂ ಮಾಡಿದ್ದಾರೆ,ಆತನನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಶಹಬಾಜ್ ರೌಡಿ ಉಸಿರು ನಿಲ್ಲಿಸಿದ್
Laxmi News 24×7