Breaking News

ಅಣ್ಣನ ಮಗುವಿಗಾಗಿ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಧ್ರುವ ಖರೀದಿ

Spread the love

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮೂಡಲಿದೆ. ಚಿರು ಅಗಲಿಕೆಯ ನಂತರ ದುಃಖದಲ್ಲಿಯೇ ಇದ್ದ ಇಡೀ ಕುಟುಂಬ ಇದೀಗ ವಿಶೇಷ ಅತಿಥಿಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿದೆ. ಅಂದರೆ, ಇನ್ನು ಕೆಲ ದಿನಗಳಲ್ಲಿ ಮೇಘನಾ ಹೆರಿಗೆ ಆಗಲಿದ್ದು, ಈಗಾಗಲೇ ಆ ದಿನಕ್ಕೆ ಇಡೀ ಕುಟುಂಬ ಎದುರು ನೋಡುತ್ತಿದೆ.

ಹೀಗಿರುವಾಗಲೇ ಅಣ್ಣನ ಮಗುವಿಗೆ ಅಂತಾನೇ ವಿಶೇಷ ಉಡುಗೊರೆಯೊಂದನ್ನು ಖರೀದಿಸಿದ್ದಾರೆ ಸಹೋದರ ಧ್ರುವ ಸರ್ಜಾ.ಹೌದು, ಬರೋಬ್ಬರಿ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಧ್ರುವ ಖರೀದಿ ಮಾಡಿದ್ದಾರೆ. ಈಗಾಗಲೇ ಆ ತೊಟ್ಟಿಲ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಧ್ರುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇನ್ನು ತುಂಬು ಗರ್ಭಿಣಿ ಆಗಿರುವ ಮೇಘನಾ, ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಂದೆ ಸುಂದರ್​ ರಾಜ್​ ಅವರೊಂದಿಗೆ ತೆರಳಿ ಚೆಕ್​ಅಪ್​ ಮಾಡಿಸಿಕೊಂಡು ಬಂದಿದ್ದಾರೆ. ಹೆರಿಗೆ ದಿನಾಂಕವನ್ನೂ ವೈದ್ಯರು ಖಚಿತಪಡಿಸಿದ್ದು, ಧ್ರುವ ಮತ್ತು ಪ್ರೇರಣಾ ಸಹ ಇದೇ ವೇಳೆ ಮೇಘನಾ ಜತೆಗಿದ್ದರು.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ