Breaking News

ಆರು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾಗಿರುವ ಮುಂಗಾರು ಮಳೆ ಹುಡುಗ ಗಣೇಶ್

Spread the love

ಬೆಂಗಳೂರು: ಲಾಕ್‍ಡೌನ್ ಬಳಿಕ ಕೊರೊನಾ ವೈರಸ್ ಆತಂಕದ ನಡುವೆ ಚಿತ್ರರಂಗದ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಸ್ಥಗಿತಗೊಂಡಿದ್ದ ಚಿತ್ರೀಕರಣ ಸಹ ಆರಂಭಗೊಂಡಿದ್ದು, ಕಲಾವಿದರು ಕಾಯಕಕ್ಕೆ ಹಿಂದಿರುಗಿದ್ದಾರೆ. ಆರು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾಗಿರುವ ಮುಂಗಾರು ಮಳೆ ಹುಡುಗ ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ನಿಂದಾಗಿ ಇಡೀ ಬಣ್ಣದ ಲೋಕ ತೆರೆಯ ಹಿಂದೆ ಸರಿದಿತ್ತು. ಅನ್‍ಲಾಕ್ ಬಳಿಕ ಸರ್ಕಾರ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಬಣ್ಣದ ಲೋಕ ಹಿಂದಿರುಗಿದೆ. ಚಿತ್ರಮಂದಿರಗಳು ತೆರೆದಿದ್ದು, ಪ್ರೇಕ್ಷಕರು ಸಹ ಥಿಯೇಟರ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿರುವ ಗೋಲ್ಡನ್ ಸ್ಟಾರ್ ತಮ್ಮ ಮತ್ತು ಕ್ಯಾಮೆರಾ ಜೊತೆಗಿನ ಅವಿನಾಭಾವ ಸಂಬಂಧ ಎಂತಹದ್ದು ಎಂಬುದನ್ನ ಕೆಲ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.ಗಣೇಶ್ ಪೋಸ್ಟ್: ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ. ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ? 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ‘ಕ್ಯಾಮೆರಾ’. ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ನಿಮ್ಮ ಹಾರೈಕೆ ಇರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ