Breaking News

ಗಂಡ ಮೊಬೈಲ್ ಕಿತ್ತುಕೊಂಡಿದ್ದಕ್ಕೆಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ

Spread the love

ಮೈಸೂರು: ಗಂಡ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಗೃಹಿಣಿಯೋರ್ವಳು ಬೇಸತ್ತು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗಾಯಿತ್ರಿ ಪುರಂನ ಎರಡನೇ ಹಂತದಲ್ಲಿ ನಡೆದಿದೆ.

24 ವರ್ಷದ ಸೂಫಿಯಾ ತನ್ನ ಮಕ್ಕಳಾದ ಮುನೇಜಾ (3) ಇನಯಾ (1) ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ. ಸೂಫಿಯಾ ಪತಿ ಮುಜಾಮಿಲ್ ಎರಡು ದಿನಗಳ ಹಿಂದೆ ಪತ್ನಿ ಬಳಿ ಇದ್ದ ಮೊಬೈಲ್ ಅನ್ನು ಕಿತ್ತುಕೊಂಡಿದ್ದ. ಇದಕ್ಕೆ ಬೇಸರಗೊಂಡ ಸೂಫಿಯಾ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮುಜಾಮಿಲ್ ಖಾಸಗಿ ಕಂಪನಿಯಲ್ಲಿ ಡಿಪ್ಲೊಮಾ ಇಂಜಿನಿಯರ್ ಕೆಲಸ ಮಾಡುತ್ತಿದ್ದು, ಪತ್ನಿ ಸೂಫಿಯಾ ಎರಡು ಮಕ್ಕಳ ಜೊತೆ ಮನೆಯಲ್ಲೇ ಇರುತ್ತಿದ್ದಳು. ಈ ವೇಳೆ ಆಕೆಯ ಬಳಿ ಇದ್ದ ಮೊಬೈಲ್ ಅನ್ನು ಮುಜಾಮಿಲ್ ಕಿತ್ತುಕೊಂಡಿದ್ದಾನೆ. ಇದರಿಂದ ಬೇಸರಗೊಂಡ ಆಕೆ ಪತಿ ಮನೆಯಲ್ಲಿದ್ದ ವೇಳೆಯೇ ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾಗಿದ್ದಾಳೆ. ಉದಯಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಜಾಮಿಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಭಗವದ್ಗೀತೆ ಜೀವನಕ್ಕೆ ಮಾರ್ಗದರ್ಶನ ಮಾಡುವ ಗ್ರಂಥ : ವಿನೋದ ದೇಶಪಾಂಡೆ

Spread the love ಬೆಳಗಾವಿ : ಭಗವದ್ಗೀತೆ ಪ್ರತಿಯೊಬ್ಬರ ಜೀವನಕ್ಕೆ, ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ಮಾಡುವ ಗ್ರಂಥ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ