Breaking News

ಮೋದಿಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಕರ್ನಾಟಕದ ಪರ ಇದ್ದಾರೆ ಎಂದಲ್ಲ,ಇಂತಹ ದಪ್ಪ ಚರ್ಮದ ಸರ್ಕಾರವನ್ನು ನಾನು ಎಂದೂ ನೋಡಿಲ್ಲ: ಸಿದ್ದರಾಮಯ್

Spread the love

ಬೆಂಗಳೂರು:  ಪ್ರವಾಹ ಹೊಡತಕ್ಕೆ ಹಲವು ಜಿಲ್ಲೆಗಳಲ್ಲಿ ರಸ್ತೆ, ಕರೆಂಟ್ ಕಂಬ, ಮನೆಗಳು  ಕೊಚ್ಚಿಹೋಗಿವೆ. ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ. ಆದ್ರೆ ಕಂದಾಯ ಸಚಿವರು ಕಾಟಾಚಾರಕ್ಕೆ ಪ್ರವಾಹ ಪೀಡಿತ ಪ್ರದೇಶ ಭೇಟಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ  ಒಂದು ಜಿಲ್ಲೆಗೂ ಭೇಟಿ ನೀಡಿಲ್ಲ. ಇಂತಹ ದಪ್ಪ ಚರ್ಮದ ಸರ್ಕಾರವನ್ನು ನಾನು ಎಂದೂ ನೋಡಿಲ್ಲ ಅಂತಾ ವಿರೋಧ ಪಕ್ಷ ನಾಯಕ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಪ್ರವಾಹದಿಂದ ಹತ್ತರಿಂದ ಹದಿನೈದು ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ.   ಎಷ್ಟೇ ಪತ್ರ ಬರೆದರೂ ಉತ್ತರವಿಲ್ಲ. ಎಲ್ಲಾ ದುಡ್ಡು ಮಾಡಲು ಕುಳಿತು ಬಿಟ್ಟಿದ್ದಾರೆ. ಎಲೆಕ್ಷನ್ ಬಂದಾಗ ದುಡ್ಡು ಖರ್ಚು ಮಾಡಿ ಗೆಲ್ಲಬಹುದು ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.

 

ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಬಂದಿದೆ, ಡಿಸಿಎಂ ಕಾರಜೋಳ ಅಲ್ಲಿಗೆ ಹೋಗೋದು ಬಿಟ್ಟು ಇಲ್ಲಿ ಎಲೆಕ್ಷನ್ ಮೆರವಣಿಗೆ ಮಾಡ್ತಾ ಕೂತಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕಕ್ಕೆ ತಾರತಮ್ಯ ತೋರುತ್ತಿದ್ದಾರೆ. ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಮೋದಿ ಬಿಹಾರಕ್ಕೆ ಹೋದರೂ ಸಹ, ಕರ್ನಾಟಕಕ್ಕೆ ಬರಲಿಲ್ಲ. ಒಮ್ಮೆಯೂ ಕರ್ನಾಟಕಕ್ಕೆ ಬರಲೇ ಇಲ್ಲ. ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಕರ್ನಾಟಕದ ಪರ ಇದ್ದಾರೆ ಎಂದಲ್ಲ ಅದನ್ನು ಯಾರೂ ಬೇಕಾದರೂ, ಯಾವ ಭಾಷೆಯಲ್ಲಾದರೂ ಟ್ವೀಟ್ ಮಾಡಬಹುದು. ಟ್ವೀಟ್ ಮಾಡಿದ ತಕ್ಷಣ ಕರ್ನಾಟಕದ ಪರ ಇದ್ದಾರೆ ಎಂದಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗೆ ಈ ಭಾರಿ ಜನರು ತಕ್ಕ  ಪಾಠ ಕಲಿಸುತ್ತಾರೆ. ರಾಜ್ಯದಿಂದ 25 ಜನ ಎಂಪಿಗಳಿದ್ದಾರೆ ಒಮ್ಮೆಯಾದರೂ ಹೋಗಿ ಜನರಿಗೆ ಅನ್ಯಾಯ ಆಗ್ತಿದೆ ಅಂತ ಕೇಳಿದ್ದಾರಾ..? ಕೇಂದ್ರದ ಎದುರು ಕೊಲೆ ಬಸವನ ಬಳಿ ತಲೆ ಅಲ್ಲಾಡಿಸುತ್ತಾರೆ. ಕೇಂದ್ರದ ಎದುರು ಮಾತನಾಡಲು ಸಿಎಂಗೂ ಧೈರ್ಯ ಇಲ್ಲ, 25 ಎಂಪಿಗಳಿಗೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ