Breaking News
Home / ಅಂತರಾಷ್ಟ್ರೀಯ / ಅಥಣಿ ನಗರದಲ್ಲಿ ಸತತವಾಗಿ ಮಳೆ ಆಗುತ್ತಿರುವುದರಿಂದ ಕೆಲವು ಕಡೆ ಮಳೆ ನೀರು ನುಗ್ಗಿ ಮನೆಗಳು ಜಲಾವೃತವಾಗಿದ್ದರೆ

ಅಥಣಿ ನಗರದಲ್ಲಿ ಸತತವಾಗಿ ಮಳೆ ಆಗುತ್ತಿರುವುದರಿಂದ ಕೆಲವು ಕಡೆ ಮಳೆ ನೀರು ನುಗ್ಗಿ ಮನೆಗಳು ಜಲಾವೃತವಾಗಿದ್ದರೆ

Spread the love

 

ಅಥಣಿ ಪಟ್ಟಣದ ಶಾಂತಿನಗರದ ಜೇರೆ ಫ್ಲಾಟ ನಲ್ಲಿ ತಗ್ಗುಪ್ರದೇಶದಲ್ಲಿ ಇರುವ ಕೆಲವು ಮನೆಗಳಲ್ಲಿ ಮಳೆ ನೀರು ಮನೆಗಳಲ್ಲಿ ನುಗ್ಗಿ ಅಲ್ಲಿ ಮನೆಗಳಲ್ಲಿ ವಾಸವಿರುವ ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದೆ ನಮ್ಮ ಪ್ರತಿನಿಧಿ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿ ವಾಸವಿರುವ ಸ್ಥಳೀಯರಾದ ಅಬ್ದುಲ್ ರೆಹಮಾನ್ ವಾರಿಮನಿ ಇವರು ಮಾತನಾಡಿ ಹಲವು ವರ್ಷದಿಂದ ಮಳೆ ಬಂದಾಗ ನಮ್ಮ ಮನೆಗಳಿಗೆ ಇದೇ ರೀತಿ ನೀರು ನುಗ್ಗುತ್ತವೆ ನಾವು ಹಲವು ಬಾರಿ ಪುರಸಭೆ

ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕಂತೆ ಅಂತ ಮನವಿ ಕೊಟ್ಟರೂ ಇಲ್ಲಿಯವರೆಗೆ ಅಧಿಕಾರಿಗಳಾಗಲಿ ಅಥವಾ ಸ್ಥಳೀಯ ಶಾಸಕರು ಹಾಗೂ ಪುರಸಭ ಸದಸ್ಯರು ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತ ಇಲ್ಲ ಮತ್ತು ಇಲ್ಲಿ ರಸ್ತೆ ಹಾಗೂ ಗಟಾರ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುತ್ತಾರೆ ಆದ್ದರಿಂದ ನಮಗೆ ಇತರ ತೊಂದರೆ ಆಗ್ತಾ ಯಂತೆ ಹೇಳಿದರು ಇದೇ ಸಂದರ್ಭದಲ್ಲಿ ಪ್ರಭು ಅಳ್ಳಿಮಟ್ಟಿ ಅವರು ಮಾತನಾಡಿ ಕಳೆದ ಎಂಟು ದಿನದಿಂದ ನಮ್ಮ ನಮ್ಮ ಮನೆಗಳಲ್ಲಿ ಮಳೆ ನೀರು ನುಗ್ಗಿದಾವೆ, ನಾವು ಅಧಿಕಾರಿಗಳಿಗೆ ತಿಳಿಸಿದರೂ ಇಲ್ಲಿಯವರೆಗೆ ಯಾರೂ ನಮ್ಮ ಮನೆಯಲ್ಲಿರುವ ನೀರನ್ನು ತೆಗೆಯುವ ವ್ಯವಸ್ಥೆ ಮಾಡಿಲ್ಲ ಅಂತ ಪುರಸಭೆ ಅಧಿಕಾರಿಗಳ ವಿರುದ್ಧ ದೂರಿದರು
ಪುರಸಭೆ ಮುಖ್ಯಾಧಿಕಾರಿಯನ್ನು ಈ ವಿಷಯದ ಬಗ್ಗೆ ಸಂಪರ್ಕಿಸಿದಾಗ ಅವರು ಇದು ಬಹಳ ವರ್ಷದ ಸಮಸ್ಯೆಯಾಗಿದ್ದು ಅಲ್ಲಿಯ ರಸ್ತೆ ಎತ್ತರವಾಗಿದ್ದು ಮನೆಗಳು ಕೆಳಮಟ್ಟ ಕಟ್ಟಲಾಗಿದೆ ಆದ್ದರಿಂದ ಮನೆಗಳಿಗೆ ಮಳೆ ನೀರು ನುಗ್ಗುತ್ತದೆ ಅಂತ ಹೇಳಿದರು ,ನಾವು ಇವತ್ತು ಮುಂಜಾನೆ ಆರು ಗಂಟೆಗೆ ಅಲಿ ಸ್ಥಳಕ್ಕೆ ಹೋಗಿ ಅಲ್ಲಿ ನಿಂತಿರುವಂತೆ ನೀರನ್ನು ಮುಂದಿನ ಚರಂಡಿಗೆ ಹೋಗುವ ಹಾಗೆ ಪೈಪ್ ಮುಖಾಂತರ ವ್ಯವಸ್ಥೆ ಮಾಡಿದ್ದೇವೆ ಮತ್ತು ನಾವು ಅಲ್ಲಿ ಹೋಗಿ ನೀರು ನಿಲ್ಲದ ಹಾಗೆ ಯಾವ ರೀತಿ ಚರಂಡಿ ಮಾಡಬೇಕು ಅಂತ ಸ್ಥಳ ಪರಿಶೀಲನೆ ಮಾಡಿ ಅಲ್ಲಿಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಆಗುವ ಹಾಗೆ ಮಾಡುತ್ತೇವೆ ಅಂತ ನಮ್ಮ ಮಾಧ್ಯಮದ ಮುಖಾಂತರ ಭರವಸೆ ಕೊಟ್ಟರು

ವರದಿ : ಮಲ್ಲೇಶ್ ಪಟ್ಟಣ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ