ಚಿಕ್ಕೋಡಿ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಕೃಷ್ಣಾ ನದಿಯಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದ್ರೆ ತುಂಬಿತುಳುಕುತ್ತಿರುವ ಕೃಷ್ಣಾ ನದಿಯಲ್ಲಿ ಯುವಕನೊಬ್ಬ ಹುಚ್ವಾಟ ಮೆರೆದಿದ್ದಾನೆ.
ಟವರ್ ಮೇಲೇರಿ ನದಿಗೆ ಹಾರಿ ಮನಸಾರೆ ಈಜಾಟ ನಡೆಸಿದ ಯುವಕ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವಕ ಸಾಗರ್ ಕೋಳಿ ಎಂಬಾತನೇ ಈ ಹುಚ್ಚಾಟ ಮೆರೆದವ.
ಸಾಗರ್ ಕೋಳಿ, ಟೆಲಿಫೋನ್ ಟವರ್ ಮೇಲೇರಿ ಅಲ್ಲಿಂದ ನದಿಗೆ ಹಾರಿ ಮನಸಾರೆ ಈಜಾಟ ನಡೆಸಿದ್ದಾನೆ.

Laxmi News 24×7