Breaking News

ಅಬ್ಬಾ! ಇದೆಷ್ಟು ದೊಡ್ಡ ಕುಂಬಳಕಾಯಿ ಗೊತ್ತಾ?

Spread the love

ಕ್ಯಾಲಿಫೋರ್ನಿಯಾ: ವಿಶ್ವದಾದ್ಯಂತ ಆವರಿಸಿರುವ ಮಹಾಮಾರಿ ಕೊರೊನಾದಿಂದ ಜನ ಸಾಕಷ್ಟು ಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಲಾಕ್​ಡೌನ್ ಸಮಯವನ್ನು ಬಳಸಿಕೊಂಡು ಅದರ ಪ್ರಯೋಜನ ಪಡೆದವರೂ ಸಹ ಸಾಕಷ್ಟು ಮಂದಿ.
   ಇದೇ ರೀತಿ ಇಲೊಬ್ಬ ವ್ಯಕ್ತಿ ತನ್ನ ಸಮಯ ಪರಿಶ್ರಮದಿಂದ 2,350 ಪೌಂಡ್ ತೂಕದ ಕುಂಬಳಕಾಯಿಯನ್ನು ಬೆಳೆಸಿದ್ದಾನೆ.

ಸದ್ಯ ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತಂದುಕೊಟ್ಟಿದೆ.

ತೋಟಗಾರಿಕಾ ಶಿಕ್ಷಕನಾಗಿರುವ 40 ರ ಹರೆಯದ ಗಿಯೆಂಜರ್ ಲಾಕ್​ಡೌನ್ ಸಮಯದಲ್ಲಿ ತಮ್ಮ ಬಹುತೇಕ ಸಮಯವನ್ನು ಕುಂಬಳಕಾಯಿ ಬೆಳೆಸಲು ಕಳೆದಿದ್ದಾರೆ. ಅವರು ತಮ್ಮ ಮನೆಯ ಹಿತ್ತಲಿನಲ್ಲೇ ಈ ಬೃಹತ್ ಕಾಯಿಯನ್ನು ಬೆಳೆಸಿದ್ದರು. ಅಲ್ಲದೆ ತಮ್ಮ ಸಸ್ಯಗಳಿಗೆ ದಿನಕ್ಕೆ 10 ಬಾರಿ ನೀರು ಹಾಕುತ್ತಿದ್ದರು.

ಮತ್ತು ಪ್ರತಿದಿನ ಕನಿಷ್ಠ ಎರಡು ಬಾರಿಯಾದರೂ ಅವುಗಳಿಗೆ ರಸಗೊಬ್ಬರ ಹಾಕುತ್ತಿದ್ದರು. ಸದ್ಯ ಇವರ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, 47 ನೇ ವಿಶ್ವ ಚಾಂಪಿಯನ್‌ಶಿಪ್ ಕುಂಬಳಕಾಯಿ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ 2,350 ಪೌಂಡ್‌ಗಳಷ್ಟು (1,066 ಕೆ.ಜಿ.) ದಾಖಲೆಯ ತೂಕದಿಂದ ವಿಜೇತರಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರತಿ ವರ್ಷವೂ ಇದೇ ರೀತಿ ಸ್ಪರ್ಧೆ ನಡೆಯುತ್ತದೆ. ಇಲ್ಲಿ ದೊಡ್ಡ ದೊಡ್ಡ ಗಾತ್ರದ ಕುಂಬಳಕಾಯಿಗಳನ್ನು ಕಣ್ತುಂಬಿಕೊಳ್ಳಬಹುದು.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ