Breaking News

ಕೊಪ್ಪಳ :  ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ  ಟಿ.ಶ್ರೀಧರ್

Spread the love

ಕೊಪ್ಪಳ :  ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ  ಟಿ.ಶ್ರೀಧರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

2012ರ ಐಪಿಎಸ್ ಬ್ಯಾಚ್ ನಲ್ಲಿ ಇವರು, ಬೆಂಗಳೂರುನಲ್ಲಿ ಗುಪ್ತಚರ ವಿಭಾಗ ಸೇರಿ  ವಿವಿಧ ಮೂರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಪ್ಪಳಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.  ಬೀದರ್ ನಲ್ಲಿ ಎಸ್ಪಿಯಾಗಿ ಕಾರ್ಯನಿರ್ವವಹಿಸಿದ್ದಾರೆ.

ಶಿಕ್ಷಣ: ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲ್ಲೂಕಿನವರು. ಪ್ರಾಥಮಿಕ ಶಿಕ್ಷಣವನ್ನು ಶಿರಗುಪ್ಪ, ಸಿಂಧನೂರಿನಲ್ಲಿ, ಕಾಲೇಜ್  ಶಿಕ್ಷಣ ಧಾರವಾಡದಲ್ಲಿ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಕ್ರಿಮಿನಾಲಜಿ (ಅಪರಾಧಶಾಸ್ತ್ರ) ಅಭ್ಯಾಸಿಸಿರುವರು. 

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ  ಮಾನವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ  ಚಿನ್ನದ ಪದಕ ಪಡೆದಿದ್ದಾರೆ.  ಪಿಎಸ್ಐ ಆಗಿ ಆಯ್ಕೆಯಾದ  ಶ್ರೀಧರ ಅವರು ಕೆಲ ಕಾಲ ಕೆಲಸ ಮಾಡಿ, ಬಳಿಕ ಉನ್ನತ ಅಧ್ಯಯನದ ಉದ್ದೇಶದಿಂದ ಹುದ್ದೆಗೆ ರಾಜೀನಾಮೆ ನೀಡಿದರು.

ಕೆಪಿಎಸ್‌ಸಿ ಮೂಲಕ ಡಿವೈ.ಎಸ್ಪಿ. ಆಗಿ ನೇಮಕವಾದರು. ರಾಯಚೂರಿನಲ್ಲಿ ಡಿಎಸ್ಪಿ ಯಾಗಿ ಸೇವೆ ಪ್ರಾರಂಭಿಸಿ.  ನಂತರ ಐಪಿಎಸ್ ಆಗಿ ಬಡ್ತಿ ಪಡೆದು ಬೀದರ್ , ಬೆಂಗಳೂರಿನಲ್ಲಿ ಕೆಲಸ ಮಾಡಿರುವರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!!

Spread the love ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!! ದೇಶದಲ್ಲಿನ ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ