Breaking News
Home / ಜಿಲ್ಲೆ / ಬೆಂಗಳೂರು / ನಿದ್ರೆ ಇಂದ ಯೆದ್ದ ಸರ್ಕಾರ ಮುಂದಿನ ಮೂರು ತಿಂಗಳು ಮತ್ತಷ್ಟು ಟಫ್ ರೂಲ್ಸ್ ಪಾಲನೆ ಕಡ್ಡಾಯ

ನಿದ್ರೆ ಇಂದ ಯೆದ್ದ ಸರ್ಕಾರ ಮುಂದಿನ ಮೂರು ತಿಂಗಳು ಮತ್ತಷ್ಟು ಟಫ್ ರೂಲ್ಸ್ ಪಾಲನೆ ಕಡ್ಡಾಯ

Spread the love

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮಗಳಿಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿದೆ. ಸರ್ಕಾರದ ಬತ್ತಳಿಕೆಯಲ್ಲಿದ್ದ ಮತ್ತೆ ಹಳೇ ನಿಯಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ. ಅಲ್ಲದೇ ಕರ್ನಾಟಕಕ್ಕೆ ಮೂರು ತಿಂಗಳು ಕೊರೊನಾ ಮಹಾ ಗಂಡಾಂತರ ಎದುರಾಗಲಿದೆ.

ಮೂರು ತಿಂಗಳಿಗೆ ಕರ್ನಾಟಕ ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಮಾಡಿದೆ. ಯಾಕೆಂದರೆ ಮುಂದಿನ ಮೂರು ತಿಂಗಳಲ್ಲಿ ಹಬ್ಬ, ಮದುವೆ, ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನವರಾತ್ರಿ ಪೂಜಾ ಕಾರ್ಯಕ್ರಮ ಜಾಸ್ತಿ ನಡೆಯಲಿದೆ. ಹೀಗಾಗಿ ಈ 3 ತಿಂಗಳಲ್ಲಿ ಫಂಕ್ಷನ್ಸ್ ಮಾಡಿದರೆ ಟಫ್ ರೂಲ್ಸ್ ಪಾಲನೆ ಕಡ್ಡಾಯವಾಗಿದೆ. ಇದರಿಂದ ಕರ್ನಾಟಕ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕೊರೊನಾ ಮಹಾ ಅಗ್ನಿಪರೀಕ್ಷೆಯನ್ನ ಎದುರಿಸಬೇಕಾಗುತ್ತದೆ.

3 ತಿಂಗಳಿಗೆ ಹೊಸ ರೂಲ್ಸ್
* ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಕಂಟೈನ್ ಮೆಂಟ್ ಝೋನ್ ಹೊರಗೆ ಅಷ್ಟೇ ಕಾರ್ಯಕ್ರಮಗಳಿಗೆ ಅನುಮತಿ.
* ಮದುವೆ, ಸಮಾರಂಭ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ರ್ಯಾಲಿ , ಸಾರ್ವಜನಿಕ ಸಮಾರಂಭ ಯಾವುದೇ ಕಾರ್ಯಕ್ರಮ ನಡೆಸಿದರೆ 65 ವರ್ಷ ಮೇಲ್ಪಟ್ಟವರನ್ನು, ಗರ್ಭಿಣಿ ಯರನ್ನು ಹಾಗೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸಬೇಕು.
* ಮದುವೆ, ಪೂಜಾ ಕಾರ್ಯ, ರ್ಯಾಲಿಗಳು ವಾರಗಟ್ಟಲೇ ನಡೆಯುವಂದ್ದರೆ ಪ್ರತಿ ದಿನವೂ ಕಡಿಮೆ ಜನ ಸೇರುವಂತೆ ನೋಡಿಕೊಳ್ಳಬೇಕು. ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
* ಪ್ರತಿ ಸಮಾರಂಭಕ್ಕೂ ಪ್ರತ್ಯೇಕ ಎಂಟ್ರಿ ಎಕ್ಸಿಟ್ ಇರಬೇಕು.

* ಜನ ಸೇರುವ ಕಾರ್ಯಕ್ರಮಗಳಲ್ಕಿ ಜನ ಸಾಮಾಜಿಕ ಅಂತರ ಪಾಲನೆ ಮಾಡುತ್ತಿದ್ದಾರೆಯೇ ಅಥವಾ ಮಾಸ್ಕ್ ಧರಿಸಿದ್ದಾರೆಯೇ ಅನ್ಮೋದನ್ನು ನೋಡಲು ಕ್ಯಾಮೆರಾ ಕಣ್ಗಾವಲು ಇರಬೇಕು.
* ರ್ಯಾಲಿ ನಡೆಸೋದಿದ್ದರೆ ಅಂಬುಲೆನ್ಸ್ ಕಡ್ಡಾಯ ಹಾಗೂ ಸ್ಥಳೀಯ ಆಸ್ಪತ್ರೆಗೆ ಮೊದಲೇ ಮಾಹಿತಿ ಕೊಟ್ಟಿರಬೇಕು.
* ಪ್ರತಿ ದೊಡ್ಡ ಕಾರ್ಯಕ್ರಮವನ್ನು ನಿರ್ದಿಷ್ಟ ಸ್ಥಳದಲ್ಲಿ ಆಯೋಜಿದರೆ ಅಲ್ಲಿ ಸೋಂಕು ಶಂಕಿತರನ್ನು ವೈದ್ಯರಿಗೆ ತೋರಿಸಬೇಕು. ವೈದ್ಯರು ಸ್ಥಳಕ್ಕೆ ಬರುವವರೆಗೆ ಐಸೋಲೇಟ್ ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಂಡಿರಬೇಕು.
* ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿನಿತಾರೆಯನ್ನು ಕರೆಸುವಂತಹ ಸಂದರ್ಭದಲ್ಲಿ ಜನಸಂದಣಿಯ ಬಗ್ಗೆ ಗಮನಹರಿಸಬೇಕು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ