Breaking News

ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

Spread the love

ಮೈಸೂರು: ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನ್ಯೂಸ್​​ಫಸ್ಟ್ ಜೊತೆ ಜಿಲ್ಲಾಧಿಕಾರಿ ಶರತ್ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನ ನೇಮಿಸಿರುವ ವಿಚಾರವಾಗಿ ಮಾತನಾಡಿದ ಡಾ.ಯತೀಂದ್ರ.. ಯಾವ ಅಧಿಕಾರಿಯನ್ನೂ ದಿಢೀರ್ ಎಂದು ವರ್ಗಾವಣೆ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದ್ರೆ ಅನುಮಾನಗಳು ವ್ಯಕ್ತವಾಗುತ್ತವೆ. ಹಣ ಪಡೆದು ವರ್ಗಾವಣೆ ಮಾಡಿದ್ರಾ? ಅಥವಾ ಯಾರದೋ ಪ್ರಭಾವದಿಂದ ವರ್ಗಾವಣೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟುತ್ತದೆ ಎಂದರು.

ಈ ರೀತಿಯಾದ್ರೆ ಆಡಳಿತ ನಡೆಸೋದು ಕಷ್ಟ ಆಗುತ್ತದೆ. ಜೊತೆಗೆ ಈಗ ದಸರಾ ಇದೆ. ಈ ಹಿಂದಿನ ಡಿಸಿ ದಸರಾ ಸಭೆಯಲ್ಲಿ ಭಾಗಿಯಾಗಿದ್ರು, ಒಂದು ವ್ಯವಸ್ಥೆ ಮಾಡಿದ್ರು. ಈ ಸಮಯದಲ್ಲಿ ಏಕಾಏಕಿ ಹೊಸ ಅಧಿಕಾರಿ ತಂದ್ರೆ ದಸರಾ ಆಡಳಿತಕ್ಕೂ ಕಷ್ಟ ಆಗುತ್ತದೆ.

ಹಾಗಾಗಿ ಇದನ್ನು ಮಾಡಿರೋದು ಸರಿಯಿಲ್ಲ ಅನ್ನೋ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ