Breaking News

ನಟಿ ಸಂಜನಾ ಗಲ್ರಾನಿ ಹೆಸರಲ್ಲಿ ಬರೋಬ್ಬರಿ 11 ಬ್ಯಾಂಕ್ ಅಕೌಂಟ್‍ಗಳಿವೆ

Spread the love

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿ ಹೆಸರಲ್ಲಿ ಬರೋಬ್ಬರಿ 11 ಬ್ಯಾಂಕ್ ಅಕೌಂಟ್‍ಗಳಿವೆ ಎಂಬ ಮಾಹಿತಿ ಹೊರಬಿದ್ದಿದೆ.ಹೌದು. ನಟಿ ಸಂಜನಾ ಹೆಸರಲ್ಲಿ ಬರೋಬ್ಬರಿ 11 ಬ್ಯಾಂಕ್ ಅಕೌಂಟ್‍ಗಳಿವೆ. ಬಂಧನವಾಗುವ ಕೆಲ ದಿನಗಳ ಮೊದಲು ಹಣ ತೆಗೆದಿದ್ದರು. 11 ಖಾತೆಗಳಲ್ಲಿ ಈಗ 40 ಲಕ್ಷ ರೂಪಾಯಿ ಇದೆ. ಅರೆಸ್ಟ್ ಆಗುವ ಮೊದಲು ಸಂಜನಾ ಸಾಕಷ್ಟು ಹಣದ ವ್ಯವಹಾರ ನಡೆಸಿದ್ದರು. ಕೆಲವೊಂದು ಖಾತೆಗಳಿಗೆ ವಿದೇಶಗಳಿಂದಲೂ ಹಣ ಜಮೆ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಹಣ ಯಾರು ಹಾಕಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸ್ತಿದ್ದು, ಶೀಘ್ರವೇ ಸಂಜನಾ ಬ್ಯಾಂಕ್ ಖಾತೆಗಳು ಫ್ರೀಜ್ ಮಾಡುವ ಸಾಧ್ಯತೆಗಳಿವೆ.

ಸಂಜನಾ ಅವರು ಮನ್ಸೂರ್ ಖಾನ್ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಹೂಡಿದ್ದರಂತೆ. ಈ ಕುರಿತು ನಟಿ ವಿಚಾರಣೆಯ ವೇಳೆ ಮೋಸ ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿದ್ದೆ, ನನ್ನ ಸ್ನೇಹಿತರು ಹಣ ಹೂಡಿದ್ದರು. ಆದರೆ ನನ್ನ ಹಣವೆಲ್ಲ ಐಎಂಎ ಕಂಪನಿ ಪಾಲಾಗಿದೆ ಎಂದು ಹಣಕಾಸು ವ್ಯವಹಾರದ ಬಗ್ಗೆ ಪೊಲೀಸರ ಬಳಿ ಹೇಳಿಕೊಂಡಿದ್ದಾರೆಸೋಮವಾರವಷ್ಟೇ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಾಗೂ ಉಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ಕೋರ್ಟ್ ವಜಾಗೊಳಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ