ರಾಜಸ್ತಾನ ರಾಯಲ್ಸ್ ಜೊತೆ ಇಂಡಿಯನ್ ಪ್ರಿಮೀಯರ್ ಲೀಗ್ನ 13 ನೇ ಆವೃತಿಯಲ್ಲಿ ಇದುವರೆಗೆ ಆಜೇಯವಾಗಿರುವ ಮತ್ತು ಉಳಿದೆಲ್ಲ ತಂಡಗಳಿಗಿಂತ ಹೆಚ್ಚು ಸಮತೋಲಿತ ಎನಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯ 11 ನೇ ದಿನ ವಾಗಿರುವ ಇಂದು ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಸನ್ರೈಸರ್ಸ್ ಹೈದರಾಬಾದನ್ನು ಅಬು ಧಾಬಿಯಲ್ಲಿ ಎದುರಿಸಲಿದೆ .
ಶ್ರೇಯಸ್ ಅಯ್ಯರ್ ಡೆಲ್ಲಿಯ ನಾಯಕನಾಗಿ ಗಮನಸೆಳೆಯುವಂ ಥ ಪ್ರಬುದ್ಧತೆಯನ್ನು ತೋರುತ್ತಿದ್ದಾರೆ . ಅವರ ಈಸಿ ಗೋ ಲಕ್ಕಿ ಅಪ್ರೋ ಚ್ನಿಂದ ಟೀಮಿನ ಇತರ ಆಟಗಾರರು ಸಹ ಪ್ರೇರಿತರಾಗುತ್ತಿದ್ದಾರೆ . ಫೀಲ್ಡ್ನಲ್ಲಿ ಅವರು ಪ್ರದರ್ಶಿತ್ತಿರುವ ಪಾಸಿಟಿವ್ ಅಪ್ರೋಚ್ ಎದುರಾಳಿಗಳನ್ನು ದಿಕ್ಕೆಡಿಸುತ್ತಿದೆ . ಈ ತಂಡದಲ್ಲಿದಿರುವ ಹೆಚ್ಚಿನ ಆಟಗಾರರು ಯುವಕರು . ಹಿಂದೆ , ಟೀ ಮ್ ಇಂಡಿಯಾದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಲಾಂಚ್ ಮಾಡಿದ ‘ನಿರ್ಭೀತಿಯ ಕ್ರಿಕೆಟ್’ ಧೋರಣೆಯನ್ನು ಡೆಲ್ಲಿ ಟೀಮು ಅಳವಡಿಸಿಕೊಂಡಿರುವಂತಿದೆ . ಇದಕ್ಕೆ ಪುಟವಿಟ್ಟಂತೆ ಅಯ್ಯರ್ ವೈಯಕ್ತಿಕ ಉದಾಹರಣೆಯೊಂದಿಗೆ ಟೀಮನ್ನು ಲೀಡ್ ಮಾಡುತ್ತಿದ್ದಾರೆ .
ಪಂಜಾಬ್ ವಿರುದ್ಧ ಆಡಿದ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಸೂಪರ್ ಓವರ್ನಲ್ಲಿ ಗೆದ್ದ ಡೆಲ್ಲಿ ಎರಡನೇಯದರಲ್ಲಿ ಚೆನೈ ಸೂಪರ್ ಕಿಂಗ್ಸ್ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿತು . ಉತ್ತಮ ರನ್ – ರೇಟ್ ಸಹ ಹೊಂದಿರುವ ಅದು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವಿದು ಅಚ್ಚರಿಯೇನಲ್ಲ .
ಶಿಖರ್ ಧವನ್ , ಪೃಥ್ವಿ ಶಾ ಮತ್ತು ಅಯ್ಯರ್ ಅವರನ್ನೊಳಗೊಂಡಿರುವ ಡೆಲ್ಲಿಯ ಟಾಪ್ ಆರ್ಡರ್ ಸಧೃಡ ಮಾತ್ರವಾಗಿರದೆ , ರನ್ ಸಹ ಗಳಿಸುತ್ತಿದೆ . ವಿಂಡೀಸ್ನ ಶರ್ಮನ್ ಹೆಟ್ಮೆಯರ್ ವಿಫಲರಾಗುತ್ತಿರುವುದು ನಿಜವಾದರೂ ಉಳಿದ ಆಟಗಾರರು ಆ ಕೊರತೆಯನ್ನು ಇದುವರೆಗೆ ಯಶಸ್ವೀಯಾಗಿ ನೀಗಿದ್ದಾರೆ . ಟೀಮಿನ ಮೆಂಟರ್ ರಿಕ್ಕಿ ಪಾಂಟಿಂಗ್ ಡಿಫರೆಂಟಾಗಿ ಯೋಚನೆ ಮಾಡುತ್ತಾರೆ ಮತ್ತು ಅವರ ಪ್ಲ್ಯಾನನ್ನು ಆಯ್ಯರ್ ಮೈದಾನದಲ್ಲಿ ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಸಕ್ಸಸ್ ಫಾರ್ಮುಲಾ ಇದರಲ್ಲೇ ಅಡಗಿರುವಂತಿದೆ. ಅಜಿಂಕ್ಯಾ ರಹಾನೆಯನ್ನು ಇನ್ನೂ ಆಡುವ ಎಲೆವೆನ್ನಲ್ಲಿ ತಾರದಿರುವುದು ಪಾಂಟಿಂಗ್ ಯುವಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದು ವೇದ್ಯವಾಗುತ್ತದೆ. ಆಲ್ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಟೀಮಿಗೆ ಉತ್ತಮ ಬ್ಯಾಲೆನ್ಸ್ ಒದಗಿಸುತ್ತಿರುವುದು ಟೀಮ್ ಥಿಂಕ್ ಟ್ಯಾಂಕನ್ನು ನಿರಾಳವಾಗಿಸಿದೆ.
ಕಗಿಸೊ ರಬಾಡ ನೇತೃತ್ವದ ವೇಗದ ಬೌಲಿಂಗ್ ವಿಭಾಗ ಸಹ ನಿರೀಕ್ಷಿತ ಪ್ರದರ್ಶನ ನೀಡುತ್ತಿದೆ . ಅನ್ರಿಖ್ ನೋರೆ ಸಕಾಲದಲ್ಲಿ ಬ್ರೇಕ್ಥ್ರೂಗಳನ್ನು ಒದಗಿಸುತ್ತಿದ್ದಾರೆ . ಇಶಾತ್ ಶರ್ಮಗೆ ಇನ್ನೂ ಚಾನ್ಸ್ ಸಿಕ್ಕಿಲ್ಲ . ಸ್ಪಿನ್ನರ್ಗಳ ವಿಷಯಕ್ಕೆ ಬಂದರೆ ಎರಡನೆ ಪಂದ್ಯದಲ್ಲಿ ಅಮಿತ್ ಮಿಶ್ರಾ ಮತ್ತು ಅಕ್ಸರ್ ಪಟೇಲ್ ಜೋಡಿಯು ರವಿಚಂದ್ರನ್ ಅವರ ಅನುಪಸ್ಥಿತಿಯನ್ನು ಮರೆಸುವ ಬೌಲಿಂಗ್ ಪ್ರದರ್ಶನ ನೀಡಿತು .
ಪಾಯಿಂಟ್ಸ್ ಟೇಬಲ್ನಲ್ಲಿ ಆಗ್ರಸ್ಥಾನದಲ್ಲಿರುವ ಡೆಲ್ಲಿಯ ಸ್ಥಿತಿ ಹೀಗಿದ್ದರೆ , ಕೊನೆಯ ಸ್ಥಾನದಲ್ಲಿದಿರುವ ಹೈದರಾಬಾದ್ ಕೊಲ್ಲಿ ರಾಷ್ಟ್ರಗಳ ಪಿಚ್ಗಳಿಗೆ ಹೊಂದಿಕೊಳ್ಳಲು ತಿಣುಕಾಡುತ್ತಿದೆ . ಮೊದಲ ಪಂದ್ಯದಲ್ಲಿ ಆರ್ ಸಿ ಬಿಗೆ ಸೋತ ನಂತರ ಎರಡನೆಯದರಲ್ಲಿ ಕೆಕೆಆರ್ಗೆ ಶರಣಾದ ಡೇವಿಡ್ ವಾರ್ನರ್ ವಿನ್ನಿಂಗ್ ವೇಸ್ ಅನ್ನು ಮರಳುಗಾಡಿನಲ್ಲಿ ಹುಡುಕಾಡುತ್ತಿದೆ . ಖುದ್ದು ವಾರ್ನರ್ ರನ್ ಗಳಿಸುವ ಕೆಲಸದಲ್ಲಿ ವಿಫಲರಾಗುತ್ತಿದ್ದಾರೆ. ಬೆಂಗಳೂರು ವಿರುದ್ಧ ಮಿಂಚಿದ ಜಾನಿ ಬೇರ್ಸ್ಟೋ, ಕೊಲ್ಕತಾ ವಿರುದ್ಧ ಮುಗ್ಗುರಿಸಿದರು. ಹೈದರಾಬಾದಿನ ಸೇವಿಂಗ್ ಗ್ರೇಸ್ ಅಂದರೆ ಕರ್ನಾಟಕದ ಬ್ಯಾಟ್ಸ್ಮನ್ ಮನೀಶ್ ಪಾಂಡೆ. ಕೆಕೆಆರ್ ಮೇಲೆ ಪಾಂಡೆ ಅರ್ಧ ಶತಕ ಬಾರಿಸಿ ಟೀಮಿಗೆ ಗರಿಷ್ಠ ವೈಯಕ್ತಿಕ ಕಾಣಿಕೆ ಒದಗಿಸಿದರು. ಆದರೆ , ಸ್ಟಾರ್ ಬ್ಯಾಟ್ಸ್ಮನ್ ಕೇನ್ ವಿಲಿಯಮ್ಸನ್ ಅವರನ್ಯಾಕೆ ಆಡುವ ಎಲೆವೆನ್ನಿಂದ ಹೊರಗಿಡಲಾಗುತ್ತಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ . ಅವರನ್ನು ಆಡಿಸಿದ್ದೇಯಾದಲ್ಲಿ ಶಿಥಿಲ ಅನಿಸುತ್ತಿರುವ ಬ್ಯಾಟಿಂಗ್ ಬಲಗೊಳ್ಳಬಹುದು.
ವೃದ್ಧಿಮಾನ್ ಸಹಾ ಕೊಲ್ಕತಾ ವಿರುದ್ಧ ರನ್ ಗಳಿಸಿದರಾದರೂ ಅವರ ಬ್ಯಾಟಿಂಗ್ನಲ್ಲಿ ಧೃಡತೆ ಕಾಣಿಸಲಿಲ್ಲ. ಪ್ರಿಯಮ್ ಗಾರ್ಗ್, ವಿಜಯ್ ಶಂಕರ್ ಸಹ ನಿರಾಶೆಗೊಳಿಸುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ರಶೀದ್ ಖಾನ್ ಅವರನ್ನು ಜಾಸ್ತಿ ನೆಚ್ಚಿಕೊಳ್ಳಲಾಗುತ್ತಿದೆ. ಹೈದರಾಬಾದ್ ಒಂದು ಯುನಿಟ್ ಆಗಿ ಫೈರ್ ಮಾಡಬೇಕಿದೆ. ಅದು ಇಂದು ಸಾಧ್ಯಾವಾಗಬಹುದೆ ಅಂತ ಕಾದು ನೋಡಬೇಕು.