ಹುಬ್ಬಳ್ಳಿ:ಇಂದು ಕೇಂದ್ರ ಸರ್ಕಾರದ ವಿರುದ್ಧ ಭಾರತ ಬಂದ್ ಗೆ ಹಲವಾರು ರೈತ ಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬಂದ್ ಗೆ ಕರೆಯನ್ನು ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕೂಡಾ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ..
ಇಂದು ಬೆಳ್ಳಿಗ್ಗೆ ಇಂದಲೇ ವಿವಿಧ ಸಂಘಟನೆಗಳು ರಸ್ತೆಗೆ ಇಳಿದಿದ್ದು ಅಂಗಡಿ ಮುಂಗಟ್ಟುಗಳನ್ನು ತೆಗೆದವರಿಗೆ ಹೂ ಕೊಡುವುದರ ಮೂಲಕ ಬಂದ್ ಗೆ ಬೆಂಬಲ ಕೊಡಬೇಕು ಎಂದು ಮನವಿಯನ್ನು ಮಾಡಿಕೊಂಡರು.
ಇನ್ನು ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ಸಾಗಿ ಅಲ್ಲಿರುವ ಸಾರಿಗೆ ಅಧಿಕಾರಿಗಳಿಗೂ ಕೂಡಾ ನಮ್ಮ ಬಂದ್ ಗೆ ಸಹಕರಿಸುವಂತೆ ಮನವಿಯನ್ನು ಕೂಡಾ ಮಾಡಿಕೊಂಡರು.ಹೀಗಾಗಿ ಹುಬ್ಬಳ್ಳಿಯಲ್ಲಿ ಭಾರತ್ ಬಂದ್ ಗೆ ಮುಂಜಾನೆ ವೇಳೆಯಲ್ಲಿ ಬೆಂಬಲ ಸಿಕ್ಕಿದೆ ಅಂತಾನೆ ಹೇಳಬಹುದು..
Laxmi News 24×7