ಬೆಂಗಳೂರು : ನಕಲಿ ವಿವಿ ಹೆಸರಿನಲ್ಲಿ ಹಣ ಪಡೆದು ಗೌರವ ಡಾಕ್ಟರೇಟ್ ನೀಡುತ್ತಿದ್ದ ತಮಿಳುನಾಡು ಮೂಲದ ಸಂಸ್ಥೆಯೊಂದು ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೌದು, ಹರಿಹರದ ಶಾಸಕ ರಾಮಪ್ಪ ಸೇರಿದಂತೆ ಸುಮಾರು 150 ಮಂದಿಗೆ ನಕಲಿ ಗೌರವ ಡಾಕ್ಟರೇಟ್ ಪದವಿ ನೀಡಲು ತಮಿಳುನಾಡು ಮೂಲದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಹೆಸರಿನ ಸಂಸ್ಥೆಯೊಂದು ಅದ್ಧೂರಿ ಸಮಾರಂಭವನ್ನು ಆಯೋಜಿಸಿತ್ತು. ಈ ಸುದ್ದಿ ತಿಳಿದ ಡಿಸಿಪಿ ಡಾ.ಎ. ಎನ್. ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಸಕ ರಾಮಪ್ಪ ಸೇರಿ 150 ಮಂದಿಗೆ ನೀಡಲು ತಂದಿದ್ದ ನಕಲಿ ಗೌರವ ಡಾಕ್ಟರೇಟ್ ಪದವಿ ಪ್ರಮಾಣ ಪತ್ರಗಳನ್ನು ಮುಟ್ಟುಗೋಲು ಹಾಕಲಾಗಿದೆ.ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಕೆಲ ವರ್ಷಗಳಿಂದ ಕರ್ನಾಟಕ ಸೇರಿ ದೇಶದ ಇತರೆ ಭಾಗಗಳಲ್ಲೂ ಗೌರವ ಡಾಕ್ಟರೇಟ್ ಹೆಸರಿನಲ್ಲಿ ದಂಧೆ ನಡೆಸಿಕೊಂಡು ಬರುತ್ತಿದ್ದು, ಗೌರವ ಪಡೆಯಲು 25 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೆ ವ್ಯವಹಾರ ಕುದುರಿಸುತ್ತಿತ್ತು ಎನ್ನಲಾಗಿದೆ.
Laxmi News 24×7