ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕರಾಗಿರುವ ಕಾಂಗ್ರೆಸ್ನ ಎಸ್ ಅರ್ ಪಾಟೀಲ್ , ಕೊವಿಡ್ -19 ಸೋಂಕನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ , ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಕೇಳಿ , ಸಚಿವರ ಕಾರ್ಯವೈಖರಿ ಬಗ್ಗೆ ಟೀಕಿಸಿದ ನಂತರ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು , ವಿಪಕ್ಷ ನಾಯಕರ ಮಾತಿನಿಂದ ತಮ್ಮ ಮನಸ್ಸಿಗೆ ನೋವಾಗಿದೆ ಎಂದರು .
ಮುಂದುವರಿದದು ಹೇಳಿದ ಸಚಿವರು , ” ಕೊವಿಡ್ -19 ಸೋಂಕಿನ ಆರಂಭದ ದಿನಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ನೀಡಿರಲಿಲ್ಲ . ಮಾರ್ಚ್ ತಿಂಗಳಲ್ಲಿ ಭಾರತದಲ್ಲೇ ಮೊದಲ ಸಾವು ಕಲಬುರಗಿಯಲ್ಲಿ ಆಯ್ತು . ಆಗ ಸ್ವತಃ ನಾನೇ ಅಲ್ಲಿಗೆ ಹೋಗಿದ್ದೆ . ಆಗ ಕೊವಿಡ್-19 ಬಗ್ಗೆ ಜನರು ಹೆಚ್ಚು ಭಯಭೀತರಾಗಿದ್ದರು.
ನಾನೇ ಮುಂದೆ ನಿಂತು ಎಲ್ಲಾ ಕೆಲಸ ಮಾನಿಟರ್ ಮಾಡಿ ವಾಪಸಾಗಿದ್ದೆ ,” ಎಂದರು.
” ಈ ವ್ಯಾಧಿಯನ್ನು ಸಂಪೂರ್ಣ ಹೊಗಲಾಡಿಸಲು ನಮ್ಮಿಂದ ಆಗಲ್ಲ . ನಾವೆಲ್ಲ ನಿಮಿತ್ತ ಮಾತ್ರ . ರಾಜ್ಯ ಸರ್ಕಾರ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡುತ್ತಿದೆ . ಟೆಕ್ನಾಲಜಿ ಮುಂದುವರಿದ ರಾಷ್ಟ್ರಗಳಲ್ಲೂ ಲಸಿಕೆ ಕಂಡುಹಿಡಿಯಲಾಗಿಲ್ಲ . ಆದರೂ ಸರ್ಕಾರಗಳು ಕೊವಿಡ್ -19 ಸೋಂಕನ್ನು ನಿಯಂತ್ರಣ ಮಾಡುತ್ತಿವೆ . ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿರುವ ಕಡೆ ಮಾತ್ರ ಈ ರೋಗ ಬಂದಿಲ್ಲ , ಎಲ್ಲ ರಾಜ್ಯಗಳಲ್ಲೂ ಅದು ವ್ಯಾಪಿಸಿದೆ . ನಮ್ಮ ಸರ್ಕಾರ ಪಿಡುಗನ್ನು ಸಮರ್ಪಕವಾಗಿ ನಿಭಾಯಿಸಿದೆ ,” ಎಂದು ಶ್ರೀರಾಮುಲು ಹೇಳಿದರು .