Breaking News

ಜಾನುವಾರು ಹುಲ್ಲುಗಾವಲಿಗೆ ಜಾಗ: ಹಲಗಾ ಗ್ರಾಮಸ್ಥರ ಆಗ್ರಹ

Spread the love

ಬೆಳಗಾವಿ: ‘ತಾಲ್ಲೂಕಿನ ಸುವರ್ಣ ವಿಧಾನಸೌಧದ ಸಮೀಪದಲ್ಲಿರುವ ಹಲಗಾ ಗ್ರಾಮದಲ್ಲಿ ಜಾನುವಾರುಗೆ ಹುಲ್ಲುಗಾವಲುಗಾಗಿ ಏಳು ಏಕರೆ ಜಾಗ ನೀಡಬೇಕು ಮತ್ತು ಪಶು ಆಸ್ಪತ್ರೆ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಹೈನುಗಾರಿಕೆ ಮತ್ತು ಕೃಷಿಯನ್ನು ಅವಲಂಬಿಸಿ ನಾವು ಜೀವನ ನಡೆಸುತ್ತಿದ್ದೇವೆ. ಸದ್ಯ ದನ, ಎಮ್ಮೆ, ಕರುಗಳನ್ನು ಮೇಯಿಸುವುದಕ್ಕೆ ನಿರ್ದಿಷ್ಟ ಜಾಗವಿಲ್ಲದೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜಾಗ ನೀಡಿ ಅಲ್ಲಿ ಹುಲ್ಲುಗಾವಲು ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

‘ಗ್ರಾಮದ ಸರ್ವೇ ‘ನಂ.262/ಎ’ಯಲ್ಲಿ ಗಾಯರಾಣ ಜಮೀನನ್ನು ಕೆಲವು ಸಂಘ ಸಂಸ್ಥೆಗಳಿಗೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸುವರ್ಣಸೌಧದ ಸಮೀಪದಲ್ಲಿರುವ ಈ ಭೂಮಿಯನ್ನು ಕಬಳಿಸಲು ಕೆಲವರು ಹೊಂಚು ಹಾಕುತ್ತಿದ್ದಾರೆ.

ಇದಕ್ಕೆ ಅವಕಾಶ ಕೊಡಬಾರದು. ಗ್ರಾಮಸ್ಥರ ಅನುಕೂಲಕ್ಕಾಗಿ ಜಮೀನು ನೀಡಬೇಕು’ ಎಂದು ಒತ್ತಾಯಿಸಿದರು.

ವಕೀಲ ಅಣ್ಣಾಸಾಹೇಬ ಘೋರ್ಪಡೆ, ವೈ.ಕೆ. ದಿವಟೆ, ಬಸಯ್ಯ ಹಿರೇಮಠ, ಮಹಾವೀರ ಬೆಲ್ಲದ, ಕೆ.ಕೆ. ಸಂತಾಜಿ, ಚಂದ್ರು ಕಾಮೋಜಿ, ಪ್ರಕಾಶ ಲೋಹಾರ, ಕಿರಣ ಹನುಮಂತಾಚೆ, ಮಹಾವೀರ ಪಾಟೀಲ, ದೀಪಕ ಕಾಮನಾಚೆ, ಪ್ರಫುಲ್ಲ ಮಾಸ್ತಮರ್ಡಿ, ಶಿವಕುಮಾರ ಹುಡೇದ, ಬಾಬು ಧಾಮಣೆಕರ, ಪರಶುರಾಮ ಬಸ್ತವಾಡಕರ, ಕಾಚು ಸಾವಂತ ಇದ್ದರು.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ