Breaking News

ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ವಿಧಾನಸಭೆ ಉಪಸಭಾಪತಿ, ಶಾಸಕ ಆನಂದ ಮಾಮನಿ

Spread the love

ಸವದತ್ತಿ) – ಬೆಂಗಳೂರಿನಲ್ಲಿ ಸೋಮವಾರ ಪ್ರಾರಂಭಗೊಳ್ಳುವ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವ ಮುನ್ನಾ ದಿನ ರವಿವಾರ  ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ವಿಧಾನಸಭೆ ಉಪಸಭಾಪತಿ, ಶಾಸಕ ಆನಂದ ಮಾಮನಿ ಅವರನ್ನು ದೇವಸ್ಥಾನ ವತಿಯಿಂದ ರವಿ ಕೊಟಾರಗಸ್ತಿ ಹಾಗೂ ದೇವಸ್ಥಾನ ಸಿಬ್ಬಂದಿ ಶಾಲೂಹೊದಿಸಿ ಸತ್ಕರಿಸಿದರು.
ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ರ ಮಾಳಗಿ, ಆರ್ ಎಚ್ ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಪಂಡಿತ ಯಡೂರಯ್ಯ, ಏಕನಗೌಡ ಮುದ್ದನಗೌಡ್ರ, ಪರಸನಗೌಡ ಕಾಳಿಂಗೌಡ್ರ, ಮಂಜನಗೌಡ ಸಂಧಿಮನಿ ಹಾಗೂ ದೇವಸ್ಥಾನ ಅರ್ಚಕರು, ದೇವಸ್ಥಾನ ಸಿಬ್ಬಂದಿ ಇದ್ದರು.

ದಸರಾ ಹಬ್ಬದ ಪ್ರಯುಕ್ತ ಪ್ರಸಾರಗೊಳ್ಳಲಿರುವ ನವಶಕ್ತಿ ದರ್ಶನ, ಚಿತ್ರೀಕರಣಕ್ಕೆ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಬೆಂಗಳೂರಿನ ಶ್ರಿಸಾಯಿ ನಿರ್ಮಲಾ ಪ್ರೋಡಕ್ಷನ್ ನ ನಿರ್ದೆಶಕಿ ನಿರ್ಮಲಾ ಚನ್ನಪ್ಪ ಹಾಗೂ ನಿರ್ಮಾಪಕ ಸರ್ದಾರ್‌ಸತ್ಯ ದಂಪತಿಯನ್ನು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಶಾಲು ಹೊದಿಸಿ ಸತ್ಕರಿಸಿದರು.

 


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ