Home / new delhi / ಜೇವರ್ಗಿ ಸಂಕೇಶ್ವರ ರಾಜ್ಯ ಹೆದ್ದಾರಿ ಸಂcಪೂರ್ಣ ಹಾಳಾಗಿದ್ದು: ವಾಹನ ಸವಾರರು ಆಕ್ರೋಶ.

ಜೇವರ್ಗಿ ಸಂಕೇಶ್ವರ ರಾಜ್ಯ ಹೆದ್ದಾರಿ ಸಂcಪೂರ್ಣ ಹಾಳಾಗಿದ್ದು: ವಾಹನ ಸವಾರರು ಆಕ್ರೋಶ.

Spread the love

 

ಅಥಣಿ: ಅಥಣಿ ಪಟ್ಟಣದಿಂದ ಐಗಳಿ ಕ್ರಾಸ್ ವರೆಗೆ ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದ್ದು ರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಥಣಿ ಇಂದ ವಿಜಯಪುರ ಅಂತಾರಾಜ್ಯ ರಸ್ತೆ ಸಂಚಾರಕ್ಕೆ ಅಪಾಯ ಮಟ್ಟಕ್ಕೆ ಹೋಗಿದ್ದು ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ಏರ್ಪಟ್ಟಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಿಂದ ಪಕ್ಕದ ಮಹಾರಾಷ್ಟ್ರ, ಹಾಗೂ ತೆಲಂಗಾಣ ರಾಜ್ಯಕ್ಕೆ ಅಥಣಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಸದ್ಯ ಈ ರಸ್ತೆ ಸರಿಯಾದ ನಿರ್ವಹಣೆ ಇಲ್ಲದೆ ಯಮ ಸ್ವರೂಪವನ್ನು ತಾಳಿದ್ದು ಪ್ರವಾಸಿಗರು ರಾಜ್ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಎರಡೂ ಬದಿಗಳಲ್ಲಿ ಆಳವಾದ ತಗ್ಗು ಬಿದ್ದಿರುವ ಪರಿಣಾಮ ಅದೇಷ್ಟೋ ಬೈಕ್ ಸವಾರರು ಆಯಾ ತಪ್ಪಿ ಬಿದ್ದು ಸಾವು ನೋವು ಸಾಮಾನ್ಯ ಎನ್ನುತ್ತಾರೆ ಸ್ಥಳಿಯರು, ಮತ್ತು ರಸ್ತೆಯ ನಟ್ಟ ನಡುವೆ ತೆಗ್ಗು ಗುಂಡಿಗಳ ತಪ್ಪಿಸಲು ಹೋಗಿ ದೊಡ್ಡ ವಾಹನಗಳ ಅಪಘಾತಗಳು ಸಾಮಾನ್ಯವಾಗಿದೆ, ಇದರಿಂದ ವಾರದಲ್ಲಿ ಒಂದಾದರೂ ಅಪಘಾತವಾಗಿ ಜೀವ ಹಾನಿ ಸಂಭವಿಸಿದೆ ಎನ್ನುತ್ತಾರೆ ದಿನನಿತ್ಯ ಸಂಚಾರ ಮಾಡುವರು.

ಸಂಭಂದ ಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಈ ರಸ್ತೆಯನ್ನು ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಾಗಿದೆ, ವರದಿ ಪರಿಣಾಮವಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರ ಎಂಬುದನ್ನು ಕಾದು ನೋಡಬೇಕಾಗಿದೆ.


Spread the love

About Laxminews 24x7

Check Also

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

Spread the love ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ