ನ್ಯೂಯಾರ್ಕ್: ರೋಚಕ ಫೈನಲ್ ಹಣಾಹಣಿಯಲ್ಲಿ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಗೆದ್ದು ಬೀಗಿದ ಡೊಮಿನಿಕ್ ಥೀಮ್ ಚೊಚ್ಚಲ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಜರ್ಮನಿಯ ಆಟಗಾರನ ವಿರುದ್ಧ ಆಸ್ಟ್ರೀಯಾದ ಆಟಗಾರ 2-6 4-6 6-4 6-3 7-6(6) ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿದರು.
ಮೊದಲ ಎರಡು ಸೆಟ್ ಗಳನ್ನು ಸೋತ ಥೀಮ್ ನಂತರ ಅದ್ಭುತವಾಗಿ ಕಮ್ ಬ್ಯಾಕ್ ಮಾಡಿ ಜಯ ಸಾಧಿಸಿದರು. 16 ವರ್ಷಗಳ ಬಳಿಕ ಮೊದಲ ಎರಡು ಸೋತರೂ ಫೈನಲ್ ಪಂದ್ಯ ಜಯಿಸಿದ ಆಟಗಾರ ಎಂಬ ಗರಿಮೆಗೆ ಪಾತ್ರರಾದರು.
Laxmi News 24×7